ಪಾಟ್ನಾ: ಪ್ರಧಾನಮಂತ್ರಿ ನರೇಂದ್ರ ಮೋದಿ ಆರ್ಬಿಐ ಗವರ್ನರ್ ವಿರುದ್ಧ ಸುಬ್ರಹ್ಮಣ್ಯಂ ಸ್ವಾಮಿ ಮಾಡಿರುವ ಆರೋಪಿಗಳನ್ನು ತಳ್ಳಿಹಾಕಿದ ಮಾರನೇ ದಿನವೇ ಆರ್ಜೆಡಿ ಮುಖ್ಯಸ್ಥ ಲಾಲು ಯಾದವ್, ಸ್ವಾಮಿ ಒಬ್ಬ ಭಸ್ಮಾಸುರನಿಗೆ ಹೋಲಿಸಿದ್ದಾರೆ.
ಕಾಂಗ್ರೆಸ್ ಪಕ್ಷದ ಅಧಿನಾಯಕಿ ಸೋನಿಯಾ ಗಾಂಧಿ ವಿರುದ್ಧ ವಾಗ್ದಾಳಿ ನಡೆಸಲು ಬಿಜೆಪಿ ಸುಬ್ರಹ್ಮಣ್ಯಂ ಸ್ವಾಮಿಯನ್ನು ರಾಜ್ಯಸಭೆ ಸದಸ್ಯರನ್ನಾಗಿ ನೇಮಕ ಮಾಡಿದೆ. ಆದರೆ. ಇದೀಗ ಸ್ವಾಮಿ ಬಿಜೆಪಿ ನಾಯಕರ ವಿರುದ್ಧ ವಾಗ್ದಾಳಿ ನಡೆಸಿ ತಾವೊಬ್ಬ ಭಸ್ಮಾಸುರ ಎನ್ನುವುದನ್ನು ಸಾಬೀತುಪಡಿಸಿದ್ದಾರೆ.
ಆಸಕ್ತಿಕರ ವಿಷಯವೆಂದರೆ, ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ಒಂದೊಮ್ಮೆ ಪ್ರಧಾನಿ ಮೋದಿಯನ್ನು ಭಸ್ಮಾಸುರ ಎಂದು ಕರೆದಿದ್ದರು.
ಸ್ವಾಮಿ ಹೆಸರನ್ನು ಪರೋಕ್ಷವಾಗಿ ಪ್ರಸ್ತಾಪಿಸದೆ, ರಘುರಾಮ್ ರಾಜನ್ ನಮ್ಮಂತೆ ದೇಶಭಕ್ತಿಯನ್ನು ಹೊಂದಿರುವಂತಹ ಪ್ರತಿಭಾವಂತ. ಅವರನ್ನು ಕೇವಲ ಪ್ರಚಾರಕ್ಕಾಗಿ ಟೀಕಿಸುವುದು ಸರಿಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದರು.
Comments are closed.