ನವದೆಹಲಿ: ಬಿಜೆಪಿಯ ಹಿರಿಯ ನಾಯಕ ಸುಬ್ರಮಣಿಯನ್ ಸ್ವಾಮಿ ಪಕ್ಷದ ಸಚಿವ ಅರುಣ್ ಜೇಟ್ಲಿ ಮತ್ತು ಈ ಮೊದಲು ಆರ್ಬಿಐ ಗವರ್ನರ್ ರಘುರಾಮ್ ರಾಜನ್ ವಿರುದ್ಧ ಹೇಳಿಕೆ ನೀಡಿರುವುದನ್ನು ಗಂಭಿರವಾಗಿ ಪರಿಗಣಿಸಿರುವ ಬಿಜೆಪಿ ಸ್ವಾಮಿ ಅವರು ಭಾಗವಹಿಸಬೇಕಿದ್ದ ಎರಡು ಕಾರ್ಯಕ್ರಮಗಳನ್ನು ರದ್ದುಗೊಳಿಸಿದೆ.
ಸೋಮವಾರ ಪ್ರಧಾನಿ ಮೋದಿಯವರು ಖಾಸಗಿ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಪರೋಕ್ಷವಾಗಿ ಸ್ವಾಮಿಯವರ ಹೇಳಿಕೆಗಳನ್ನು ಟೀಕಿಸಿದ್ದರು. ಮತ್ತು ಯಾರೂ ಕೂಡ ವ್ಯವಸ್ಥೆಗಿಂತ ನಾವೇ ದೊಡ್ಡವರು ಎಂಬ ಮನೋಭಾವನೆ ಹೊಂದುವುದು ಸರಿಯಲ್ಲ ಎಂಬ ಕಿವಿಮಾತು ಕೂಡ ಹೇಳಿದ್ದರು.
ರಘುರಾಂ ರಾಜನ್ ಅವರನ್ನು ಅಮೆರಿಕದ ಹಿಂಬಾಲಕ ಎಂದು ಕರೆದಿದ್ದ ಸ್ವಾಮಿ ಕೆಲ ದಿನಗಳ ಹಿಂದೆ ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ ವಿರುದ್ಧವೂ ಅಪಸ್ವರ ತೆಗೆದಿದ್ದರು, ಈ ಕುರಿತು ಬಿಜೆಪಿ ನಾಯಕರುಗಳು ಸ್ವಾಮಿ ವಿರುದ್ಧ ಗರಂ ಆಗಿದ್ದು, ಪಕ್ಷದ ಮಂತ್ರಿಗಳ ವಿರುದ್ಧ ಬೇಕಾಬಿಟ್ಟಿ ಮಾತನಾಡುವುದು ಬಿಡಬೇಕೆಂದು ಸ್ವಾಮಿಗೆ ತಾಕೀತು ಮಾಡಿದೆ.
ರವಿವಾರ ಮುಂಬೈನಲ್ಲಿ ಏರ್ಪಡಿಸಿದ್ದ ಸಮಾರಂಭದಲ್ಲಿ ಅತಿಥಿಯಾಗಬೇಕಿದ್ದ ಸ್ವಾಮಿಗಾಗಿ ಕಾರ್ಯಕ್ರಮ ರದ್ದುಗೊಳಿಸಿದೆ, ಅಂತೆಯೆ ಈ ವಾರದಲ್ಲಿ ಚೆನ್ನೈಯಲ್ಲಿ ನಡೆಯಬೇಕಿದ್ದ ಆರ್ಎಸ್ಎಸ್ ಸಮಾರಂಭವೂ ಸ್ವಾಮಿ ಅವರ ಬಹಿರಂಗ ಟೀಕೆಗೆ ಹಿಂಜರಿದು ರದ್ದಾಗಿದೆ.
Comments are closed.