ರಾಷ್ಟ್ರೀಯ

ಪಾಕ್‌ಗೆ ನೀಡಿದ್ದ ಇಫ್ತಾರ್‌ ಆಹ್ವಾನ ವಾಪಸ್‌ ಪಡೆದ ಮುಸ್ಲಿಂ ಮಂಚ್‌

Pinterest LinkedIn Tumblr

pakಹೊಸದಿಲ್ಲಿ : ಪಾಕ್‌ ಹೈಕಮಿಷನರ್‌ಗೆ ಆರ್‌ಎಸ್‌ಎಸ್‌ನ ಮುಸ್ಲಿಂ ಮಂಚ್‌ ನೀಡಿದ್ದ ಇಫ್ತಾರ್‌ ಕೂಟದ ಆಹ್ವಾನವನ್ನು ಹಿಂಪಡೆದುಕೊಳ್ಳಲಾಗಿದೆ. ಕಾಶ್ಮೀರದ ಪಾಂಪೋರ್‌ನಲ್ಲಿ ಉಗ್ರರು ಭೀಕರ ದಾಳಿ ನಡೆಸಿ 8 ಮಂದಿ ಸಿಆರ್‌ಪಿಎಫ್ ಜವಾನರ ಹತ್ಯೆ ನಡೆದಿರುವು ದನ್ನು ಖಂಡಿಸಿ ಸಂಘಟನೆ ಈ ಕಠಿಣ ನಿರ್ಧಾರ ತೆಳೆದಿದೆ.

ಪಾಕ್‌ ಹೈ ಕಮಿಷನರ್‌ ಅಬ್ದುಲ್‌ ಬಾಸಿತ್‌ ಅವರು ಪಾಂಪೋರ್‌ ದಾಳಿಯನ್ನು ಖಂಡಿಸಲು ವಿಪಲವಾದ ಹಿನ್ನಲೆಯಲ್ಲಿ ಇಫ್ತಾರ್‌ ಕೂಟದ ಆಹ್ವಾನವನ್ನು ಹಿಂಪಡೆದುಕೊಂಡಿದ್ದೇವೆ ಎಂದು ಮುಸ್ಲಿಂ ಮಂಚ್‌ನ ರಾಷ್ಟ್ರೀಯ ಸಂಚಾಲಕ ಮಹಮದ್ ಆಫ್ಜಲ್ ಟ್ವೀಟ್ ಮಾಡಿದ್ದಾರೆ.

ಜುಲೈ 2 ರಂದು ಮುಸ್ಲಿಂ ಮಂಚ್‌ ಇಫ್ತಾರ್‌ ಕೂಟವನ್ನು ಆಯೋಜಿಸಿದ್ದು ಇದರಲ್ಲಿ ಪಾಲ್ಗೊಳ್ಳಲು ಪಾಕಿಸ್ತಾನ ಸೇರಿ 140 ದೇಶಗಳನ್ನು ಆಹ್ವಾನಿಸಿತ್ತು.

ಪಾಂಪೋರ್‌ ದಾಳಿಯ ಹೊಣೆಯನ್ನು ಲಷ್ಕರ್‌ ಎ ತೋಯ್ಬಾ ಉಗ್ರ ಸಂಘಟನೆ ಹೊತ್ತುಕೊಂಡಿತ್ತು. ಭೀಕರ ದಾಳಿಯಲ್ಲಿ ಉಗ್ರರ ಗುಂಡಿಗೆ 8 ಮಂದಿ ಸಿಆರ್‌ಪಿಎಫ್ ಜವಾನರು ಹುತಾತ್ಮರಾಗಿದ್ದು, 20ಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡಿದ್ದರು.
-ಉದಯವಾಣಿ

Comments are closed.