ಮನೋರಂಜನೆ

ಒಂದಾಗುತ್ತಿರುವ ಶಾರೂಕ್ ಖಾನ್ ಅನುಷ್ಕಾ ಜೋಡಿ ! ವಿರಾಟ್ ಕೊಹ್ಲಿ…..?

Pinterest LinkedIn Tumblr

sahrukh

ಮುಂಬೈ: ಬಾಲಿವುಡ್’ನ ಮೋಸ್ಟ್ ವಾಂಟೆಡ್ ಬೆಡಗಿ ಅನುಷ್ಕಾ ಶರ್ಮಾ ಹಿಂದಿ ಚಿತ್ರರಂಗದ ಕಿಂಗ್ ಕಾನ್ ಶಾರೂಕ್ ಜೊತೆ ಬೆರೆಯುತ್ತಿರುವ ಸುದ್ದಿ ಬಿಗ್ ಟೌನ್’ನಲ್ಲಿ ಎಲ್ಲಡೆ ಹರಡುತ್ತಿದೆ. ಇವರಿಬ್ಬರು ಒಂದಾದರೆ ಚಾಲ್ತಿಯಲ್ಲಿರುವ ಗೆಳೆಯ ಸ್ಟಾರ್ ಕ್ರಿಕೆಟರ್ ವಿರಾಟ್ ಕೊಹ್ಲಿಯ ಗತಿಯೇನಾಗಬೇಕು.

ಇದೇನಪ್ಪ ಇದು ಇತ್ತೀಚಿಗಷ್ಟೆ ಬೇರ್ಪಟ್ಟು ಮತ್ತೆ ಜೋಡಿಯಾಗಿರುವ ವಿರಾಟ್ ಹಾಗೂ ಅನುಷ್ಕಾ ಮತ್ತೇ ಬೇರೆಯಾದರಾ ಎಂದು ಶಾಕ್ ಆಗಬೇಡಿ. ಶಾರೂಕ್ ಮತ್ತು ಅನುಷ್ಕಾ ಜೋಡಿ ಒಂದಾಗುತ್ತಿರುವುದು ತಮ್ಮ ವೈಯುಕ್ತಿಕ ಜೀವನದಲ್ಲಿ ಅಲ್ಲ ಸಿನಿಮಾ ಜಗತ್ತಿನಲ್ಲಿ.

ಈಗಾಗಲೇ ಇವರಿಬ್ಬರ ಜೋಡಿ ‘ರಬ್ ದೇ ಬನಾದೆ ಜೋಡಿ’ ಹಾಗೂ ‘ಜಬ್ ತಕ್ ಹೇ ಜಾನ್’ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಈಗ ಈ ಜೋಡಿ ನಿರ್ದೇಶಕ ಇಮ್ತಿಯಾಜ್ ಅಲಿ ನಿರ್ದೇಶನದಲ್ಲಿ ಮೂರನೇ ಬಾರಿಗೆ ಒಂದಾಗುತ್ತಿದ್ದಾರೆ. ಈ ಬಗ್ಗೆ ಸ್ವತಃ ಇಮ್ತಿಯಾಜ್ ಅಲಿಯವರೆ ಅಧಿಕೃತವಾಗಿ ಘೋಷಣೆ ಮಾಡಿದ್ದಾರೆ.

‘ಏ ದಿಲ್ ಹೇ ಮುಷ್ಕಿಲ್, ಸುಲ್ತಾನ್ ಹಾಗೂ ಫಿಲ್ಲೌರಿ ಚಿತ್ರಗಳ ಪೂರ್ಣ ಹಂತದ ಚಿತ್ರೀಕರಣದ ನಂತರ ಇಮ್ತಿಯಾಜ್ ನಿರ್ದೇಶನದಲ್ಲಿ ಶಾರೂಕ್ ಜೊತೆ ನಾಯಕಿಯಾಗಿ ನಟಿಸಲಿದ್ದೇನೆ’ ಎಂದು ಸ್ವತಃ ಅನುಷ್ಕಾ ಶರ್ಮಾ ಅವರೇ ತಿಳಿಸಿದ್ದಾರೆ.

ಚಿತ್ರೀಕರಣ ಶುರುವಾಗುವ ಚಿತ್ರಕ್ಕೆ ಹೆಸರನ್ನು ನಾಮಕರಣ ಮಾಡಿಲ್ಲ. ಜುಲೈ 2016 ರಿಂದ ದೇಶ ವಿದೇಶಗಳಲ್ಲಿ ಶೂಟಿಂಗ್ ಶುರುವಾಗಲಿದೆ ಎಂದು ಬಾಲಿವುಡ್

Comments are closed.