ಕರ್ನಾಟಕ

ಚಲಿಸುತ್ತಿದ್ದ ರೈಲಿನ ಮೇಲೆ ನಿಂತು ಪ್ರಾಣದೊಂದಿಗೆ ಚೆಲ್ಲಾಟವಾಡಿದ ಯುವಕ.

Pinterest LinkedIn Tumblr

train_boy_jump

ಮುಂಬೈ,ಜೂ.28 : ಜೀವದೊಂದಿಗೆ ಚೆಲ್ಲಾಟ ಆಡುವುದು ಎಂದರೆ ಕೆಲವರಿಗೆ ನೀರು ಕುಡಿದಷ್ಟೆ ಸುಲಭ ಎನ್ನಿಸುತ್ತದೆ, ಹೀಗೆಯೆ ಸ್ನೇಹಿತರೊಂದಿಗೆ ಪಂದ್ಯಕಟ್ಟಿ ಪ್ರಾಣವನ್ನೇ ಪಣಕಿಟ್ಟ ಯುವಕನೊಬ್ಬ ಮುಂಬೈ ಲೋಕಲ್ ಟ್ರೈನಿನ ಮೇಲೆ ನಿಂತು ಪ್ರಯಾಣಿಸಿದ್ದಾನೆ.

ಟ್ರೈನಿನ ಮೇಲೆ ನಿಂತು ಪ್ರಯಾಣಿಸಿದ ಯುವಕ, ವಿದ್ಯುತ್ ತಂತಿಗಳ ನಡುವೆಯೇ ನುಸುಳಿಕೊಂಡು ಮುಂದೆ ಹೋಗಿದ್ದಾನೆ. ಪಕ್ಕದ ಟ್ರೈನಿನಲ್ಲಿನ ಪ್ರಯಾಣಿಸುತ್ತಿದ್ದ ವ್ಯಕ್ತಿಯೊಬ್ಬ ಇದನ್ನು ವಿಡಿಯೋ ಮಾಡಿ ಯುಟೂಬ್ ನಲ್ಲಿ ಹಾಕಿದ್ದಾನೆ. ಸ್ನೇಹಿತರೊಂದಿಗೆ ಪಣ ಕಟ್ಟಿದ ಯುವಕ, ತನ್ನ ಧೈರ್ಯ ಮತ್ತು ಸಾಹವನ್ನು ತೋರಿಸಲು ಈ ರೀತಿ ಮಾಡಿದ್ದಾನೆ ಎಂದು ತಿಳಿದು ಬಂದಿದೆ.

Comments are closed.