ಕರಾವಳಿ

ಅಕ್ರಮ ಅಡಿಕೆ ಅಮದಿನಿಂದ ಕೊಲ್ಕತ್ತಾ ಅಡಿಕೆ ಬೆಳೆಗಾರರಿಗೆ ನಷ್ಟ : ಸಚಿನ್ ಮಿಗಾ

Pinterest LinkedIn Tumblr

congress_sacin_miga_1

ಮಂಗಳೂರು,ಜೂ.28:  ಇಂಡೋನೇಶ್ಯಾ, ಬರ್ಮಾ ಮೊದಲಾದ ರಾಷ್ಟ್ರಗಳಿಂದ ದೇಶಕ್ಕೆ ಅಕ್ರಮವಾಗಿ ಅಡಿಕೆ ಅಮದು ಆಗುವ ಹಿನ್ನೆಲೆಯಲ್ಲಿ ಅಡಿಕೆ ಧಾರಣೆ ತೀವ್ರವಾಗಿ ಕುಂಟಿತವಾಗಿದೆ.ಇದರಿಂದಾಗಿ ಕೊಲ್ಕತ್ತಾ ಅಡಿಕೆ ಬೆಳೆಗಾರರು ಧರಣಿ ನಡೆಸಲು ನಿರ್ಧರಿಸಿರಿದ್ದಾರೆ ಎಂದು ಕರ್ನಾಟಕ ಪ್ರದೇಶ ಕಿಸಾನ್ ಕಾಂಗ್ರೆಸ್ ಅಧ್ಯಕ್ಷ ಸಚಿನ್ ಮಿಗಾ ಹೇಳಿದ್ದಾರೆ.

ದ.ಕ.ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಸೋಮವಾರ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಈ ಧರಣಿಯನ್ನು ಕೇವಲ ಕೇಂದ್ರ ಸರಕಾರದ ಗಮನ ಈ ಅಕ್ರಮ ಆಡಿಕೆ ಸಾಗಟದ ಕಡೆ ಸೆಳೆಯುವ ಸಲುವಾಗಿ ನಡೆಸಲಾಗುವುದು ಎಂದು ಅವರು ತಿಳಿಸಿದರು.

congress_sacin_miga_2

ರಾಜ್ಯದ ಸುಮಾರು 5, 000 ರೈತರು ಈ ಧರಣಿಯಲ್ಲಿ ಭಾಗವಹಿಸುವ ಮೂಲಕ ಕೇಂದ್ರ ಸರಕಾರದ ಗಮನ ಸೆಳೆಯಲಿದ್ದಾರೆ ಎಂದು ಅವರು ಹೇಳಿದರು. ಲೋಕಸಭಾ ಚುನಾವಣೆಯ ಪೂರ್ವದಲ್ಲಿ ತಾವು ಅಧಿಕಾರಕ್ಕೆ ಬಂದಾಕ್ಷಣ ಸುಪ್ರೀಂ ಕೋರ್ಟ್ಗೆ ಅಡಿಕೆ ಹಾನಿಕಾರಕವಲ್ಲ ಎಂಬ ಬಗ್ಗೆ ವರದಿ ಮತ್ತು ಪ್ರಮಾಣ ಪತ್ರ ಸಲ್ಲಿಸುವುದಾಗಿ ಹೇಳಿ ರೈತರಿಗೆ ಭರವಸೆ ನೀಡಿತ್ತು. ಅಂದು ಭರವಸೆ ನೀಡಿದವರಲ್ಲಿ ಒಬ್ಬರಾಗಿರುವ ದ.ಕ. ಜಿಲ್ಲೆಯವರೇ ಆಗಿರುವ, ಪ್ರಸ್ತುತ ಕೇಂದ್ರದಲ್ಲಿ ಕಾನೂನು ಸಚಿವರಾಗಿರುವ ಸದಾನಂದ ಗೌಡರೂ ಸೇರಿದಂತೆ ಬಿಜೆಪಿಯವರು ಎರಡು ವರ್ಷವಾದರೂ ತಮ್ಮ ಭರವಸೆಯನ್ನು ಈಡೇರಿಸಿಲ್ಲ ಎಂದು ಸಚಿನ್ ಮಿಗಾ ಟೀಕಿಸಿದರು.

ಗಡಿ ಕಾಯುವ ಮೂಲಕ ಸೈನಿಕರು ದೇಶ ಸೇವೆ ಮಾಡಿದರೆ, ಅನ್ನ ನೀಡುವ ಮೂಲಕ ರೈತರೂ ಜನಸೇವೆ ಮಾಡುತ್ತಿದ್ದಾರೆ. ಹಾಗಾಗಿ ಸೈನಿಕರಿಗೆ ನೀಡಲಾಗುವ ಪಿಂಚಣಿಯನ್ನು ರೈತರಿಗೂ ನೀಡಬೇಕು ಎಂದು ಆಗ್ರಹಿಸಿದರು.

ಶಾಸಕ ಜೆ.ಆರ್.ಲೋಬೋ, ಜಿಲ್ಲಾ ಕಾಂಗ್ರೆಸ್ ಹಂಗಾಮಿ ಅಧ್ಯಕ್ಷ ಇಬ್ರಾಹೀಂ ಕೋಡಿಜಾಲ್, ಕಾಂಗ್ರೆಸ್ ನಾಯಕರಾದ ಟಿ.ಕೆ. ಸುಧೀರ್, ಪಿ.ವಿ. ಮೋಹನ್ ಮೊದಲಾದವರು ಉಪಸ್ಥಿತರಿದ್ದರು.

Comments are closed.