ರಾಷ್ಟ್ರೀಯ

ಮೊಬೈಲ್ ಫೋನ್ ಹೆಚ್ಚು ಬಳಕೆಯಿಂದ ವಯಸ್ಸಾದಂತೆ ಕಾಣುತ್ತಾರಂತೆ…!

Pinterest LinkedIn Tumblr

mobನವದೆಹಲಿ: ಮೊಬೈಲ್ ಪೋನ್ ಮತ್ತು ಟ್ಯಾಬ್ಲೆಟ್ ಸೇರಿದಂತೆ ಎಲೆಕ್ಟ್ರಾನಿಕ ವಸ್ತುಗಳ ಮಿತಿಮೀರಿದ ಬಳಕೆಯಿಂದಾಗಿ ಬಳಕೆದಾರರು ವಯಸ್ಸಾದಂತೆ ಕಾಣುತ್ತಾರೆ ಎಂದು ಆರೋಗ್ಯ ತಜ್ಞರು ಎಚ್ಚರಿಕೆ ನೀಡಿದ್ದಾರೆ.

ಆರೋಗ್ಯ ತಜ್ಞರ ಪ್ರಕಾರ, ಮಿತಿಮೀರಿದ ಎಲೆಕ್ಟ್ರಾನಿಕ ವಸ್ತುಗಳ ಬಳಕೆಯಿಂದಾಗಿ, ಚರ್ಮದ ಹೊಳಪು ಕಡೆಮೆಯಾಗುವುದರ ಜೊತೆಗೆ ಚರ್ಮ ಇಳಿಬೀಳುವಿಕೆ, ಕೊರಳೆಲುಬು ಮೇಲೆ ಗೆರೆ ಬರುವ ಸಮಸ್ಯೆಗಳು ಕಾಡುತ್ತವೆ ಎಂದು ತಿಳಿಸಿದೆ.

ನಿರಂತರವಾಗಿ ಕೆಳಗೆ ಬಾಗಿ ಸ್ಮಾರ್ಟ್‌ಪೋನ್ ಟ್ಯಾಬ್ಲೆಟ್, ಕಂಪ್ಯೂಟರ್ ಸೇರಿದಂತೆ ಎಲೆಕ್ಟ್ರಾನಿಕ್ ವಸ್ತುಗಳನ್ನು ಮಿತಿಮೀರಿ ಬಳಸುವವರಲ್ಲಿ ಸುಕ್ಕುಗಳು ಕಾಣಿಸಿಕೊಳ್ಳುತ್ತದೆ. ಮೈಯನ್ನು ಬಾಗಿಸಿಕೊಂಡು ನಿರಂತರವಾಗಿ ಸ್ನೇಹಿತರೊಂದಿಗೆ ಚಾಟ್ ಮಾಡುವ ಬಳಕೆದಾರರಲ್ಲಿ ಬೆನ್ನು ಮತ್ತು ಭುಜ ನೋವು, ತಲೆನೋವು, ಮರಗಟ್ಟುವಿಕೆ, ಜುಮ್ಮೆನಿಸುವಿಕೆ ಮತ್ತು ಕೈ, ತೋಳು ಮತ್ತು ಮೊಣಕೈ ನೋವು ಕಾಣಿಸಿಕೊಳ್ಳುತ್ತದೆ ಎಂದು ಮುಂಬೈ ಮೂಲದ ಫೋರ್ಟಿಸ್ ಆಸ್ಪತ್ರೆಯ ಕಾಸ್ಮೆಟಿಕ್ ಸರ್ಜನ್ ವಿನೋದ್ ವಿಜ್ ತಿಳಿಸಿದ್ದಾರೆ.

ಇಂಟರ್ನೆಟ್ ಮತ್ತು ಮೊಬೈಲ್ ಅಸೋಸಿಯೇಷನ್ ಆಫ್ ಇಂಡಿಯಾದ ಇತ್ತೀಚಿನ ವರದಿ ತಿಳಿಸುವಂತೆ, ಪ್ರಸಕ್ತ ಸಾಲಿನ ಜೂನ್ ತಿಂಗಳ ಅಂತ್ಯದೊಳಗೆ ಭಾರತೀಯ ಮೊಬೈಲ್ ಗ್ರಾಹಕರ ಸಂಖ್ಯೆ 371 ಮಿಲಿಯನ್ ಗಡಿ ದಾಟಲಿದೆ ಎಂದು ತಿಳಿಸಿದೆ. ಅಂಕಿ ಅಂಶಗಳಲ್ಲಿ 40 ಪ್ರತಿಶತ ಬಳಕೆದಾರರು 19 ರಿಂದ 30 ವಯಸ್ಸಿನವರಿದ್ದಾರೆ ಎಂದು ವರದಿ ತಿಳಿಸುತ್ತಿದೆ.

Comments are closed.