ಪಾಟ್ಣಾ: ಕೇವಲ ಕಾನೂನಿನ ಮೂಲಕ ಮಾತ್ರ ರಾಮ ಮಂದಿರ ನಿರ್ಮಾಣ ಸಾಧ್ಯ ಎಂದು ವಿಹೆಚ್ಪಿ ನಾಯಕ ಪ್ರವೀಣ್ ತೊಗಾಡಿಯಾ ಅಭಿಪ್ರಾಯ ಪಟ್ಟಿದ್ದಾರೆ.
ಪಾಟ್ಣಾದಲ್ಲಿ ಮೂರು ದಿನಗಳ ವಿಹೆಚ್ಪಿ ಸಭೆಯನ್ನು ಉದ್ದೇಶಿಸಿ ಮಾತನ್ನಾಡುತ್ತಿದ್ದ ತೊಗಾಡಿಯಾ, ಕೋರ್ಟ್ ಆದೇಶ ಅಥವಾ ಪರಸ್ಪರ ಒಪ್ಪಿಗೆ ರಾಮಮಂದಿರ ನಿರ್ಮಾಣಕ್ಕೆ ದಾರಿ ಮಾಡಿಕೊಡುವುದಿಲ್ಲ. ಕೇವಲ ಸಂಸತ್ತಿನಲ್ಲಿ ಕಾನೂನು ತರುವುದರ ಮೂಲಕ ಮಾತ್ರ ಇದನ್ನು ಸಾಧ್ಯವಾಗಿಸಬಹುದು ಎಂದಿದ್ದಾರೆ.
ಜತೆಗೆ ಕಾನೂನನ್ನು ಜಾರಿಗೆ ತರುವಂತೆ ಅವರು ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರಕ್ಕೆ ಆಗ್ರಹಿಸಿದ್ದಾರೆ.
ರಾಮಮಂದಿರ ನಿರ್ಮಾಣಕ್ಕೆ ವಿಹೆಚ್ಪಿ ಬದ್ಧವಾಗಿದೆ ಎಂದ ಅವರು ರಾಮ ಮಂದಿರ ನಿರ್ಮಾಣಕ್ಕೆ ಮಾಡುತ್ತಿರುವ ಸದ್ಯದ ಆಗ್ರಹಕ್ಕೂ ಉತ್ತರ ಪ್ರದೇಶ ಚುನಾವಣೆ ಜತೆ ಸಂಬಂಧ ಹೊಂದಿದೆಯೇ ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಲಿಲ್ಲ.
ದೇಶಾದ್ಯಂತ ವಿವಿಧ ನಗರ ಮತ್ತು ಪಟ್ಟಣಗಳಿಂದ ಹಿಂದೂಗಳು ವಲಸೆ ಹೋಗುತ್ತಿರುವುದು ಮಾನವ ಹಕ್ಕುಗಳ ಉಲ್ಲಂಘನೆ ಎಂದ ಅವರು ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸುವಂತೆ ಕೇಂದ್ರ ಸರ್ಕಾರವನ್ನು ಕೇಳಿಕೊಂಡಿದ್ದಾರೆ.
Comments are closed.