ಉಡುಪಿ: ಶಾಲಾ ಬಸ್ಸು ಚಾಲಕ ತನ್ನ ಸಮಯಪ್ರಜ್ಞೆ ಮೆರೆದ ಪರಿಣಾಮ ಇನ್ನೊಂದು ಶಾಲಾ ಬಸ್ಸಿನ ನಡುವೆ ಸಂಭವಿಸಲಿದ್ದ ದೊಡ್ಡ ಅಪಘಾತವೊಂದು ತಪ್ಪಿಹೋಗಿದೆ. ಸೋಮವಾರ ಉಡುಪಿಯ ಬೀಡಿನಗುಡ್ಡೆ ಕಿರುಸೇತುವೆ ಬಳಿ ಈ ಘಟನೆ ನಡೆದಿದೆ.

ಉಡುಪಿ ಪೆರಂಪಳ್ಳಿಯ ಟ್ರಿನಿಟಿ ಸ್ಕೂಲ್ ಬಸ್ಸು ವಿದ್ಯಾರ್ಥಿಗಳನ್ನು ಶಾಲೆಗೆ ಬಿಟ್ಟು ವಾಪಾಸ್ಸಾಗುತ್ತಿತ್ತು. ಈ ಸಂದರ್ಭ ಎದುರಿನಿಂದ ಬಂದ ಮತ್ತೊಂದು ಶಾಲಾ ಬಸ್ಸು ಡಿಕ್ಕಿಯಾಗುವ ಹಂತದಲ್ಲಿ ಟ್ರಿನಿಟಿ ಶಾಲಾ ಬಸ್ಸು ಚಾಲಕ ಬಸ್ಸನ್ನು ಕೊಂಚ ಎಡಭಾಗಕ್ಕೆ ತಿರುಗಿಸಿದ್ದಾನೆ. ಎದುರುಗಡೆ ಬರುತ್ತಿದ್ದ ಬಸ್ಸಿನಲ್ಲಿ ಹಲವು ವಿದ್ಯಾರ್ಥಿಗಳಿದ್ದು ಬಸ್ಸು ಸುರಕ್ಷಿತವಾಗಿ ಮುಂದೆ ಸಾಗಿದೆ.
ಟ್ರಿನಿಟಿ ಸ್ಕೂಲ್ ಬಸ್ಸು ಕೊಂಚ ವಾಲಿಕೊಂಡು ನಿಂತಿತ್ತು. ಕಿರುಸೇತುವೆಯಾದ ಪರಿಣಾಮ ಇಂತಹದ್ದೊಂದು ಘಟನೆ ಸಂಭವಿಸಿದೆ. ಈ ಅವ್ಯವಸ್ಥೆಯನ್ನು ಶೀಘ್ರ ಸರಿಪಡಿಸುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.
ನಾಗರೀಕರು ಬಸ್ಸು ಚಾಲಕನ ಸಮಯಪ್ರಜ್ಞೆಯನ್ನು ಕೊಂಡಾಡುತ್ತಿದ್ದಾರೆ.
Comments are closed.