ಕರ್ನಾಟಕ

ದಾಂಪತ್ಯ ಜೀವನಕ್ಕೆ ಕಾಲಿಟ್ಟ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್; ರಾಜಸ್ಥಾನ ಯುವರಾಣಿಯನ್ನು ವಿಧಿವಿಧಾನದ ಮೂಲಕ ವರಿಸಿದ ಮೈಸೂರು ಮಹಾರಾಜ’

Pinterest LinkedIn Tumblr

yadu

ಮೈಸೂರು: ಮೈಸೂರು ಅರಮನೆಯ ಮೂಯುರ ಕಲ್ಯಾಣ ಮಂಟಪದಲ್ಲಿ ಇಂದು ಮೈಸೂರು ಮಹಾರಾಜ ಯದುವೀರ್ ಹಾಗೂ ತ್ರಿಷಿಕಾ ಕುಮಾರಿ ಸಿಂಗ್ ಅವರ ವಿವಾಹವೂ ಅದ್ದೂರಿಯಾಗಿ ನೆರವೇರಿದ್ದು, ಕರ್ಕಾಟಕ ಲಗ್ನ ಸಾವಿತ್ರಿ ಮಹೂರ್ತದಲ್ಲಿ ರಾಜಸ್ಥಾನ ಸಂಸ್ಥಾನದ ಯುವರಾಣಿ ತ್ರಿಷಿಕಾ ಕುಮಾರಿಗೆ ಒಡೆಯರಾದ ಯದುವೀರರು ಮಾಂಗಲ್ಯ ಧಾರಣೆ ಮಾಡುವ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟದ್ದಾರೆ.

yadu1

1-Mysore-Big_web

ರಾಜಮಾತೆ ಪ್ರಮೋದಾದೇವಿ ಒಡೆಯರ್ ಮಾರ್ಗದರ್ಶನದಲ್ಲಿ ರಾಜಪುರೋಹಿತರು, ಕುಲಪುರೋಹಿತರು ಮುಹೂರ್ತ ಕಾರ್ಯಕ್ರಮವನ್ನು ವಿಧಿವಿಧಾನದ ಮೂಲಕ ನೆರವೇರಿಸಿದ್ದಾರೆ. ನವ ಜೋಡಿಗೆ ಆಶೀರ್ವದಿಸಲು ಆಗಮಿಸಿದ ಪರಕಾಯಶ್ರೀಗಳು ಸಂಪ್ರದಾಯದಂತೆ ಆಶೀರ್ವಾದ ನೀಡಿದ್ದಾರೆ. ಪರಕಾಯಮಠ ದಿಂದ ಅಕ್ಷತೆಯೊಂದಿಗೆ ಆಗಮಿಸಿ ರಾಜ ಗುರುಗಳಿಂದ ನೂತನ ದಂಪತಿಗಳು ಆಶೀರ್ವಾದ ಪಡೆದಿದ್ದಾರೆ.

ಮೈಸೂರು ಮಹಾರಾಜರ ಮದುವೆಯಲ್ಲಿ ಗಣ್ಯಾತಿಗಣ್ಯರು ಆಗಮಿಸಿದ್ದು, ದೇಶ-ವಿದೇಶಗಳಿಂದ ಆಗಮಿಸಿದ ಸಂಬಂಧಿಕರು ಮದುವೆಗೆ ಸಾಕ್ಷಿಯಾಗಿದ್ದಾರೆ. ಇನ್ನು ಭದ್ರತೆ ದೃಷ್ಟಿಯಿಂದ ಮದುವೆಗೆ ಲಗ್ನಪತ್ರಿಕೆ ಇದ್ದವರಿಗೆ ಮಾತ್ರ ಅರಮನೆ ಪ್ರವೇಶ ಅವಕಾಶ ನೀಡಲಾಗಿತ್ತು.

ವಿವಾಹ ಸಮಾರಂಭಕ್ಕೆ ಮೇವಾಡ, ಜೈಪುರ, ಜೋಧಪುರ, ಉದಯಪುರ, ಕಿಷನ್ನಗರ, ಭರತ್ಪುರ, ಗ್ವಾಲಿಯರ್, ಭರತ್ ಪುರದ ರಾಜಮನೆತದವರು ಬಂದಿದ್ದಾರೆ.

ಅರಮನೆಗೆ ಬಿಗಿ ಭದ್ರತೆ ಒದಗಿಸಲಾಗಿದೆ. ಮೂಲಗಳ ಪ್ರಕಾರ ಬೆಂಗಳೂರಿನಿಂದ ಖಾಸಗಿ ಭದ್ರತಾ ಸಿಬ್ಬಂದಿಯನ್ನು ಕರೆಸಲಾಗಿದೆ. ಜೂನ್ 29ರ ವರೆಗೆ ಸಾರ್ವಜನಿಕರಿಗೆ ಅರಮನೆ ಪ್ರವೇಶ ನಿಷೇಧಿಸಲಾಗಿದೆ.

Comments are closed.