ಕರ್ನಾಟಕ

ವಾಟ್ಸಪ್’ನ ಹೊಸ ಎಕ್ಸ್’ಕ್ಲೂಸಿವ್ ಆವೃತ್ತಿ ‘ವಾಟ್ಸಪ್’ ಗೋಲ್ಡ್

Pinterest LinkedIn Tumblr

whatsapp_gold_scam

ಜನಪ್ರಿಯ ಜಾಲತಾಣ ವಾಟ್ಸಪ್ನಲ್ಲಿ ಮುಗ್ದರನ್ನು ವಂಚಿಸಲು ಹೊಸದಾದ ರೀತಿಯಲ್ಲಿ ಸೈಬರ್ ಕ್ರಿಮಿನಲ್’ಗಳು ಹೊಸದಾದ ಉಪಾಯವನ್ನು ಕಂಡು ಹಿಡಿದಿದ್ದಾರೆ. ಆದ್ದರಿಂದ ಈ ಕೆಳಗಿನ ರೀತಿ ಸಂದೇಶ ಬಂದರೆ ಅದನ್ನು ತೆರೆಯಬೇಡಿ ಎಂದು ಬ್ರಿಟನ್’ನ ಇಂಡಿಪೆಂಡೆಂಟ್ ಸುದ್ದಿಸಂಸ್ಥೆ ವರದಿ ಮಾಡಿದೆ.

ವಾಟ್ಸಪ್’ನ ಹೊಸ ಎಕ್ಸ್’ಕ್ಲೂಸಿವ್ ಆವೃತ್ತಿ ‘ವಾಟ್ಸಪ್’ ಗೋಲ್ಡ್’ ಈಗ ಬಿಡುಗಡೆಗೊಂಡಿದ್ದು ಡೌನ್’ಲೋಡ್ ಮಾಡಲು ಈ ಲಿಂಕನ್ನು ಕ್ಲಿಕ್ಕಿಸಿ ಸೈನ್ ಅಪ್ ಮಾಡಿ ಎಂಬ ಸಂದೇಶ ವಾಟ್ಸಪ್’ನಲ್ಲಿ ಹರಿದಾಡುತ್ತಿದೆ ಎನ್ನಲಾಗಿದೆ. ಆ ಲಿಂಕನ್ನು ಕ್ಲಿಕ್ಕಿಸಿದಾಗ ಬಳಕೆದಾರರ ಫೋನ್ ಮೇಲ್’ವೇರ್ ದಾಳಿಗೊಳಗಾಗಿ ಹಾನಿಯಾಗಿರುವುದು ವರದಿಯಾಗಿದೆ.

ಈವರೆಗೆ ಕೇವಲ ಪ್ರಖ್ಯಾತ ತಾರೆಯರಿಗೆ ಲಭ್ಯವಿದ್ದ ನವೀನ ಇಮೇಜಿಗಳು, ವಿಡಿಯೋ ಕರೆ, ಹೆಚ್ಚಿನ ಸುರಕ್ಷತೆ ಮುಂತಾದ ಹಲವು ಸೌಲಭ್ಯಗಳು ವಾಟ್ಸಪ್’ ಗೋಲ್ಡ್’ನಲ್ಲಿ ಲಭ್ಯವಿದೆಯೆಂದು ತಿಳಿಸಿ ಮುಗ್ಧ ಬಳಕೆದಾರರನ್ನು ಆಕರ್ಷಿಸಲಾಗುತ್ತಿದೆ.

ಬಳಕೆದಾರರ ಫೋನ್’ಗೆ ಆ ಆಯಪ್ ಡೌನ್’ಲೋಡ್ ಮಾಡಿದ ಕೂಡಲೇ ಫೋನ್’ನಲ್ಲಿರುವ ಎಲ್ಲಾ ಮಾಹಿತಿಗಳನ್ನು ಕದಿಯುವುದು, ಹಾಗೂ ಬಳಕೆದಾರರ ಚಲನವಲನಗಳ ಮೇಲೆ ನಿಗಾವಹಿಸುವುದು ಸೈಬರ್ ಕ್ರಿಮಿನಲ್’ಗಳ ಉದ್ದೇಶವಾಗಿರಬಹುದು ಎಂದು ಹೇಳಲಾಗಿದೆ.

Comments are closed.