ಹಟ್ಟಿ: ಹಟ್ಟಿ ಪಟ್ಟಣಕ್ಕೆ ವಂದಲಿ, ರೋಡಲಬಂಡಾ, ಯಲಗಟ್ಟಾ, ಗೆಜ್ಜಲಗಟ್ಟಾ, ಪಲಕನಮರಡಿ, ಊಟಿ, ಸೋಮನಮರಡಿ, ನಗನೂರು, ಆನ್ವರಿ, ಮಲ್ಲಾಪೂರ, ಗುರುಗುಂಟಾ, ಕೋಠಾ, ನಿಲೋಗಲ್ ಕಸನ ದೊಡ್ಡಿಿ, ಹೀರಾ-ಬುದ್ಧಿನ್ನಿ ಸೇರಿದಂತೆ ಸುತ್ತಲಿನ ಹತ್ತು ಹಳ್ಳಿಗಳಿಂದ ಹಲವಾರು ವಿದ್ಯಾಾರ್ಥಿಗಳು ಪ್ರಾಾಥಮಿಕ, ಪ್ರೌೌಢ, ಪದವಿ ಪೂರ್ವ, ಪದವಿ ಕಾಲೇಜು ವಿದ್ಯಾಾಭ್ಯಾಾಸಕ್ಕೆೆ ಆಗಮಿಸುತ್ತಾಾರೆ. ಸಮಯಕ್ಕೆೆ ಸರಿಯಾಗಿ ಸಾರಿಗೆ ಬಸ್‌ಗಳ ವ್ಯವಸ್ಥೆೆ ಇಲ್ಲದೆ ಶಾಲಾ ವಿದ್ಯಾಾರ್ಥಿಗಳು ಸಂಜೆಯಾದರೂ ಮನೆ ಸೇರದೆ ಬಸ್ ನಿಲ್ದಾಾಣದಲ್ಲಿ ವಾಹನಗಳಿಗಾಗಿ ಪರದಾಡುವ ಸ್ಥಿಿತಿ ಎದುರಾಗಿದೆ.
ಹಟ್ಟಿಿಯಿಂದ ಸಿರವಾರಕ್ಕೆೆ ತೆರಳುವ ಬಸ್‌ನ ಕೊರತೆ ಇದ್ದು, ಇನ್ನು ಖಾಸಗಿ ಟೆಂಪೊ ಟ್ರಾಾಕ್‌ಸ್, ಆಟೋಗಳಲ್ಲಿ ತೆರಳಲು ವಿದ್ಯಾಾರ್ಥಿಗಳು ತೀವ್ರ ಪರದಾಡಬೇಕಾಗಿದೆ. ವಿದ್ಯಾಾರ್ಥಿನಿಯರ ಸಂಕಷ್ಟ ಹೇಳ ತೀರದಾಗಿದೆ.
ಪಟ್ಟಣದಿಂದ ಹಳ್ಳಿಿಗಳಿಗೆ ಹೋಗಬೇಕಾದರೆ ಶಾಲಾ ಸಮಯದಲ್ಲಿ ಬಸ್‌ಗಳಿಲ್ಲ. ಅಲ್ಲದೇ, ಸಮಯಕ್ಕೆೆ ಸರಿಯಾಗಿ ಬಸ್‌ಗಳು ಬರುವುದಿಲ್ಲ, ಇದರಿಂದ ಸಂಜೆಯಾದರೂ ಮಕ್ಕಳು ಮನೆಗೆ ಬರುವ ಬಗ್ಗೆೆ ಪಾಲಕರು ಆತಂಕದಿಂದ ದಾರಿ ಕಾಯುವಂತಾಗಿದೆ.
ಸಿರವಾರ, ಗಲಗ, ಕವಿತಾಳ, ಪಾಮನಕೆಲ್ಲೂರು ಮಾರ್ಗವಾಗಿ ಶಾಲಾ ಸಮಯದಲ್ಲಿ ಸಮಯಕ್ಕೆೆ ಸರಿಯಾಗಿ ಬಸ್‌ಗಳನ್ನು ಓಡಿಸುವ ವ್ಯವಸ್ಥೆೆ ಮಾಡಬೇಕು. ಇಲ್ಲದಿದ್ದರೆ ಮಕ್ಕಳು ಅಕ್ಷರ ಕಲಿಯುವುದರ ಬದಲಾಗಿ ಬಸ್‌ಗಾಗಿ ಸಮಯ ವ್ಯಯ ಮಾಡಬೇಕಾಗುತ್ತದೆ.
ಸಂಜೆ ವೇಳೆ ಸಿರವಾರ ಮಾರ್ಗವಾಗಿ ಬಸ್‌ಗಳ ಸಂಖ್ಯೆೆ ಕಡಿಮೆ ಇವೆ. ಇದರಿಂದ ರಾತ್ರಿಿ 7.30ಕ್ಕೆೆ ಊರು ತಲುಪುತ್ತೇವೆ. ಊಟ, ಉಪಚಾರ, ಶಾಲೆಯಲ್ಲಿ ನೀಡಿದ ಮನೆ ಕೆಲಸ, ಓದು ಸಾಧ್ಯವಾಗುವುದಿಲ್ಲ ಸಾರಿಗೆ ಅಧಿಕಾರಿಗಳಿಗೆ ಗ್ರಾಾಮೀಣ ವಿದ್ಯಾಾರ್ಥಿಗಳು ಸಾರಿಗೆ ಸಂಕಷ್ಟ ನಿವಾರಣೆಗೆ ಸಮರ್ಪಕ ಸಾರಿಗೆ ವ್ಯವಸ್ಥೆೆ ಕಲ್ಪಿಿಸಬೇಕು ಎಂದು ವಿದ್ಯಾಾರ್ಥಿಗಳು ಆಗ್ರಹಿಸಿದರು.
ಗ್ರಾಾಮೀಣ ಪ್ರದೇಶಕ್ಕೆೆ ಶಾಲಾ ವಿದ್ಯಾಾರ್ಥಿಗಳಿಗೆ ಬಸ್‌ನ ಸಮಸ್ಯೆೆ ಇರುವುದು ನಿಜ. ಈ ಬಗ್ಗೆೆ ಹಟ್ಟಿಿ ಸಂಚಾರ ನಿಯಂತ್ರಕರೊಂದಿಗೆ ಮಾತನಾಡಿ ಹೆಚ್ಚಿಿನ ಬಸ್‌ಗಳನ್ನು ಹೊಡಿಸಲು ಕ್ರಮ ಕೈಗೊಳ್ಳಲಾಗುವುದು.
ಪ್ರಕಾಶ ದೊಡ್ಡಮನಿ, ಘಟಕ ವ್ಯವಸ್ಥಾಾಪಕರು ಲಿಂಗಸ್ಗೂರು
Comments are closed.