ರಾಷ್ಟ್ರೀಯ

ಮನೆಗೆ ಪತ್ನಿ ಮರಳದ ಸಿಟ್ಟು, ಹನುಮ ವಿಗ್ರಹ ಪುಡಿಗೈದ ಪತಿ

Pinterest LinkedIn Tumblr

1-marriage_webಇಂಧೋರ್: ತವರು ಮನೆಗೆ ಹೋದ ತನ್ನ ಹೆಂಡತಿ ಹಿಂದಿರುಗಿ ಬರಲಿಲ್ಲ ಎಂಬ ಕಾರಣಕ್ಕೆ ಯವಕನೊಬ್ಬ ದೇವಾಲಯದ ಹನುಮಂತನ ವಿಗ್ರಹವನ್ನು ಹಾನಿ ಮಾಡಿದ ಘಟನೆ ಪಲ್ಡಾ ಎಂಬಲ್ಲಿ ನಡೆದಿದೆ.

ಮನೋಜ್ ಬಂಜಾರಾ ಎಂಬ 37ರ ಯುವಕನ ಹೆಂಡತಿ ಪತಿಯೊಂದಿಗೆ ಕೋಪ ಮಾಡಿ ನಾಲ್ಕು ತಿಂಗಳ ಹಿಂದೆ ತವರು ಮನೆಗೆ ಹೋಗಿದ್ದಳು. ಹೆಂಡತಿಯನ್ನು ಪುನಃ ಮನೆಗೆ ಕರೆದುಕೊಂಡು ಬರಲು ಮನೋಜ್ ಮಾಡಿದ್ದ ಪ್ರಯತ್ನಗಳೆಲ್ಲಾ ವಿಫಲವಾಗಿದ್ದವು.

ಕೊನೆಗೆ ಪರಿಹಾರಕ್ಕಾಗಿ ದೇವರ ಮೊರೆ ಹೋಗಿದ್ದ. ತನ್ನ ಪ್ರಾರ್ಥನೆ ಫಲಿಸದ ಕಾರಣ ಆಕ್ರೋಶಗೊಂಡ ಮನೋಜ್ ಅಲ್ಲಿನ ಪ್ರಸಿದ್ಧ ಖೇದಾಪತಿ ಹನುಮಂತನ ದೇವಾಲಯಕ್ಕೆ ಹೋಗಿ ಹನುಮಂತ ವಿಗ್ರಹಕ್ಕೆ ಹಾನಿ ಮಾಡಿದ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಪ್ರಕರಣ ದಾಖಲಿಸಿದ್ದು ಮನೋಜ್ ಬಂಜಾರಾನನ್ನು ಬಂಧಿಸಿದ್ದಾರೆ.

ಘಟನೆಗೆ ಸಂಬಂಧಿಸಿದಂತೆ ಪಲ್ಡಾದಲ್ಲಿ ಉದ್ದಿಗ್ನ ಪರಿಸ್ಥಿತಿ ನಿರ್ವಣವಾಗಿದೆ.

Comments are closed.