ಮನೋರಂಜನೆ

ರಿಯೋ ಒಲಿಂಪಿಕ್ಸ್: ಅರ್ಜೆಂಟೀನಾ ತಂಡದಲ್ಲಿ ಮೆಸ್ಸಿಗೆ ಸ್ಥಾನ ಅಲಭ್ಯ

Pinterest LinkedIn Tumblr

messiಫುಟ್ ಬಾಲ್ ಜಗತ್ತಿನ ಸ್ಟಾರ್ ಆಟಗಾರ ಅರ್ಜೆಂಟೀನಾದ ಲಿಯೋನೆಲ್ ಮೆಸ್ಸಿ ಅವರು ರಿಯೋ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಪಾಲ್ಗೊಳ್ಳುತ್ತಿಲ್ಲ ಎಂದು ವರದಿಯಾಗಿದೆ.

ಅರ್ಜೆಂಟೀನಾದ ಖ್ಯಾತ ಫುಟ್ ಬಾಲ್ ಆಟಗಾರನಾಗಿರುವ ಮೆಸ್ಸಿ ಅವರ ಹೆಸರನ್ನು ಕೋಚ್ ಗೆರಾರ್ಡೋ ಮಾರ್ಟಿನೋ ಪ್ರಕಟಿಸದೇ ಇದನ್ನು ಖಚಿತಪಡಿಸಿದ್ದಾರೆ.
ಕೋಚ್ ಗೆರಾರ್ಡೋ ಅವರು 0 ಮಂದಿ ಆಟಗಾರರ ಪಟ್ಟಿ ಪ್ರಕಟಿಸಿದ್ದು, ಅದರಲ್ಲಿ ಗಿಯೋವನಿ ಲೋ ಸೆಲ್ಸೋ, ಗೆರೋನಿಮೊ ರುಲ್ಲಿ, ಆಂಗಲ್ ಕೊರ್ರೆಯಾ, ಎಮ್ಯಾನ್ಯುಯೆಲ್ ಮಮ್ಮನಾ, ಜೊನಾಥನ್ ಸಿಲ್ವಾ, ಜೋಸ್ ಲೂಯಿಸ್ ಗೊಮೆಜ್, ಮೌರಿಸಿಯೋ ಮಾರ್ಟಿನ್ಜ್, ಲೆಯಾಂಡ್ರೊ ಪ್ಯಾರೆಡೆಸ್ ಮತ್ತು ಕ್ರಿಸ್ಟಿಯಾನ್ ಎಸ್ಪಿನೋಜಾ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಆಡಲಿರುವ ಅರ್ಜೆಂಟೀನಾ ತಂಡದಲ್ಲಿ ಸ್ಥಾನ ಗಳಿಸಿಕೊಂಡಿರುವ ಆಟಗಾರರು.
2008ರ ಬೀಜಿಂಗ್ ಒಲಿಂಪಿಕ್ಸ್ ನಲ್ಲಿ ತಂಡಕ್ಕೆ ಸ್ವರ್ಣ ಗೆದ್ದು ಕೊಡುವಲ್ಲಿ ಲಿಯೋನೆಲ್ ಮೆಸ್ಸಿ ಮಹತ್ವದ ಪಾತ್ರ ವಹಿಸಿದ್ದರು.

Comments are closed.