
ಮೈಸೂರು: ಯದುವಂಶದ ಮಹಾರಾಜ ಯದುವೀರ್ ಚಾಮರಾಜ ಒಡೆಯರ್ ಅವರ ವಿವಾಹ ಕಾರ್ಯಕ್ರಮಗಳು ಮೈಸೂರು ಅರಮನೆಯಲ್ಲಿ ಇಂದಿನಿಂದ ಶುರುವಾಗಲಿದೆ. ಜೂನ್ 27ರಂದು ಯದುವೀರ್ ರಾಜಸ್ಥಾನದ ರಾಜಮನೆತನದ ತ್ರಿಶಿಕಾ ಕುಮಾರಿ ಅವರನ್ನ ವರಿಸಲಿದ್ದಾರೆ. ಇದಕ್ಕಾಗಿ ಮೈಸೂರಿನ ಅರಮನೆಯನ್ನ ಇಂದಿನಿಂದ 6 ದಿನಗಳ ಕಾಲ ಸಾರ್ವಜನಿಕರ ಪ್ರವೇಶಕ್ಕೆ ನಿರ್ಭಂದ ಹೇರಲಾಗಿದೆ.
ಯದುವಂಶದ ಯದುವೀರ ಕೃಷ್ಣರಾಜ ಒಡೆಯರ್ ಮದುವೆ ಸಂಭ್ರಮ ಮೈಸೂರಿನಲ್ಲಿ ಕಳೆಕಟ್ಟಿದೆ. ಮೈಸೂರು ಅರಮನೆಯ ಒಳಭಾಗದ ಕಲ್ಯಾಣ ಮಂಟಪದಲ್ಲಿ ಮದುವೆ ಸಮಾರಂಭ ನಡೆಯಲಿದ್ದು . ಇಂದು ರಾಜಮನೆತನದಂತೆ ಮದುವೆಯ ಸಿದ್ಧತೆಗಳು ಪೂಜಾ ಕೈಕಂರ್ಯಗಳು ನೆರವೇರಲಿವೆ.
ನಾಳೆ ಬೆಳಗ್ಗೆಯಿಂದ ಸಂಜೆವರೆಗೂ ಮಂತ್ರಘೋಷಗಳು ಮೊಳಗಲಿವೆ. ಅರಮನೆ ಮುಂಭಾದಲ್ಲಿ ಗಣ್ಯರಿಗೆ ಊಟದ ವ್ಯವಸ್ಥೆ ಮಾಡಲಾಗಿದೆ. ಮದುವೆಯ ದಿನ ಹಾಗೂ ಆರತಕ್ಷತೆಯಲ್ಲಿ ಯದುವೀರ್ ತೊಡುವ ಬಟ್ಟೆಯನ್ನು ಸ್ವತ: ಅವರ ತಾಯಿ ಪ್ರಮೋದಾದೇವಿ ಅವರೇ ವಿನ್ಯಾಸಗೊಳಿಸಿದ್ದಾರೆ. ರಾಜ ಚಿಹ್ನೆ ಗಂಡುಬೇರುಂಡದ ಚಿತ್ರದ ಅಂಗಾರಕ ಹೆಸರಿನ ವಿಶಿಷ್ಟ ಉಡುಪನ್ನು ಯದುವೀರ ಧರಿಸಲಿದ್ದಾರೆ.
ಈ ಹಿಂದೆ ರಾಜಮನೆತನದಲ್ಲಿ ನಡೆದ ಮದುವೆ ಕಾರ್ಯಗಳಿಗೆ ಪ್ರಜೆಗಳನ್ನ ಆಹ್ವಾನಿಸಿ ಅವರಿಗೆ ವಸ್ತ್ರ, ನೀಡಿ ಊಟ ಉಪಚಾರ ನೆರವೇರಿಸಲಾಗ್ತಿತ್ತು, ಈಗ ಕಾಲ ಬದಲಾಗಿದೆ. ಯಧುವೀರ್ ಮದುವೆಗೆ ಕುಟುಂಬಸ್ಥರು, ಆಪ್ತರು ವಿವಿಐಪಿಗಳಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ. ಅದೇನೆ ಇರಲಿ ಇಂದಿನಿಂದ ಆರು ದಿನ ಸಾರ್ವಜನಿಕರ ಅರಮನೆ ಪ್ರವೇಶ ಇರಲ್ಲ.
Comments are closed.