ಕರ್ನಾಟಕ

ಜೀವಿಸಲು ಬೆಂಗಳೂರು ದೇಶದಲ್ಲೇ ನಾಲ್ಕನೇ ದುಬಾರಿ ನಗರ

Pinterest LinkedIn Tumblr
OLYMPUS DIGITAL CAMERA
OLYMPUS DIGITAL CAMERA

ಬೆಂಗಳೂರು: ಕಳೆದ ವರ್ಷಕ್ಕೆ ಹೋಲಿಸಿದರೆ ಸುಮಾರು 4% ಹಣದುಬ್ಬರದಿಂದ ಬೆಂಗಳೂರು ದೇಶದಲ್ಲೇ ನಾಲ್ಕನೇ ದುಬಾರಿ ನಗರವಾಗಿ ಹೊರಹೊಮ್ಮಿದೆ. ಮುಂಬೈ, ದೆಹಲಿ ಮತ್ತು ಚೆನ್ನೈನ ನಂತರದ ಸ್ಥಾನವನ್ನು ಬೆಂಗಳೂರು ಪಡೆದುಕೊಂಡಿದೆ.

ನ್ಯೂಯಾರ್ಕ್ ಮೂಲದ ಮಾನವ ಸಂಪನ್ಮೂಲಗಳ ಸಂಸ್ಥೆ ನಡೆಸಿರುವ ಮರ್ಸರ್ 2016 ‘ಕಾಸ್ಟ್ ಆಫ್ ಲಿವಿಂಗ್’ ಸಮೀಕ್ಷೆಯಲ್ಲಿ ಜಾಗತಿಕವಾಗಿ ಬದುಕಲು ದುಬಾರಿಯಿರುವ ನಗರಗಳನ್ನು ಪಟ್ಟಿ ಮಾಡಿದೆ. ಮನೆ, ಸಂಪರ್ಕ ಮತ್ತಿತರ ದಿನನಿತ್ಯದ ಅವಶ್ಯಕತೆಗಳನ್ನು ಗಮನದಲ್ಲಿಟ್ಟುಕೊಂಡು ಮಾಡಿರುವ ಸಮೀಕ್ಷೆಯಲ್ಲಿ ಮುಂಬೈ 82 ನೇ ಸ್ಥಾನ, ದೆಹಲಿ 130 ನೇ ಸ್ಥಾನ, ಚೆನ್ನೈ 158 ನೇ ಸ್ಥಾನ ಮತ್ತು ಬೆಂಗಳೂರು 180 ನೇ ಸ್ಥಾನದಲ್ಲಿವೆ.
ಮುಂಬೈ, ಸಿಯಾಟಲ್(83), ಪ್ಹ್ರಾಂಕ್ ಫರ್ಟ್(88), ಕ್ಯಾನ್ ಬೆರ್ರಾ (98), ಬರ್ಲಿನ್ (100) ಮತ್ತು ಇಸ್ತಾನ್ ಬುಲ್ (100) ನಗರಗಳಿಗಿಂತಲೂ ದುಬಾರಿಯಾಗಿ ಈ ಪಟ್ಟಿಯಲ್ಲಿ ಕಾಣಿಸಿಕೊಂಡಿದೆ.
ಕಳೆದ ವರ್ಷ 183 ನೇ ಸ್ಥಾನದಲ್ಲಿ ಬೆಂಗಳೂರು ಪಟ್ಟಿಯಲ್ಲಿ ಮೂರು ಸ್ಥಾನಗಳನ್ನು ಜಿಗಿದು, ಆಹಾರ ಪದಾರ್ಥ ಮತ್ತಿತರ ಸೇವೆಗಳ ಹಣದುಬ್ಬರದಿಂದ ಜೀವಿಸಲು ದುಬಾರಿಯಾಗಿರುವುದನ್ನು ಸೂಚಿಸಿದೆ.
ವಿಶ್ವದ ಅತಿ ದುಬಾರಿ ನಗರಗಳಾಗಿ ಹಾಂಕಾಂಗ್, ಲಾಂಡಾ, ಜ್ಯುರಿಕ್, ಸಿಂಗಾಪುರ್ ಮತ್ತು ಟೋಕಿಯೋ ಮೊದಲ ಐದು ಸ್ಥಾನಗಳಲ್ಲಿವೆ.

Comments are closed.