ರಾಷ್ಟ್ರೀಯ

ಸಲ್ಮಾನ್‌ ಖಾನ್‌ ವಿರುದ್ಧ ದೂರು ದಾಖಲು

Pinterest LinkedIn Tumblr

salಲಕ್ನೊ(ಐಎಎನ್‌ಎಸ್‌): ಅತ್ಯಾಚಾರಕ್ಕೊಳಗಾದ ಮಹಿಳೆಗೆ ಹೋಲಿಸಿ ಹೇಳಿಕೆ ನೀಡಿದ ನಟ ಸಲ್ಮಾನ್‌ ಖಾನ್‌ ವಿರುದ್ಧ ಕಾನ್ಪುರ ಮತ್ತು ಲಕ್ನೊ ಕೋರ್ಟ್‌ನಲ್ಲಿ ಗುರುವಾರ ದೂರು ದಾಖಲಾಗಿವೆ.

ಈ ಸಂಬಂಧ ಸಾಮಾಜಿಕ ಕಾರ್ಯಕರ್ತ ರಾಫಟ್‌ ಜಮಾಲ್‌ ಅವರು ಲಕ್ನೊದ ಮುಖ್ಯ ಮ್ಯಾಜಿಸ್ಟ್ರೇಟ್‌ ಅವರಿಗೆ ದೂರು ಸಲ್ಲಿಸಿದ್ದು, ಇಂಥ ಹೇಳಿಕೆ ನೀಡಿರುವ ಸಲ್ಮಾನ್‌ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.
ವಕೀಲ ಮನೋಜ್‌ ಕುಮಾರ್‌ ಅವರು ಕಾನ್ಪುರದ ಹೆಚ್ಚುವರಿ ಮುಖ್ಯ ಮೆಟ್ರೊಪಾಲಿಟನ್‌ ಮ್ಯಾಜಿಸ್ಟ್ರೇಟರ್‌ಗೆ ದೂರು ಸಲ್ಲಿಸಿದ್ದು, ಸಲ್ಮಾನ್‌ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.
ಅಭಿವ್ಯಕ್ತಿ ಸ್ವಾತಂತ್ರ್ಯ ಎಲ್ಲರ ಹಕ್ಕು. ಅದರೆ, ಇನ್ನೊಬ್ಬರ ಮಸ್ಸಿಗೆ ನೋವುಂಟು ಮಾಡುವಂತೆ ಹೇಳಿಕೆ ನೀಡಿರುವುದರಿಂದ ದೂರು ದಾಖಲಿಸಿದ್ದೇನೆ ಎಂದು ಮನೋಜ್‌ ಹೇಳಿದ್ದಾರೆ.
‘ಸುಲ್ತಾನ್‌’ ಚಿತ್ರದ ಪ್ರಚಾರ ಸಂದರ್ಶನದಲ್ಲಿ ಸಲ್ಮಾನ್‌, ‘ಶೂಟಿಂಗ್‌ ನಂತರ, ಕುಸ್ತಿ ಜಾಗದಿಂದ ಎದ್ದು ಬರುವಾಗ ನನಗೆ ಅತ್ಯಾಚಾರಕ್ಕೆ ಒಳಗಾದ ಮಹಿಳೆಯಂತೆ ಅನಿಸುತ್ತಿತ್ತು’ ಎಂದು ಹೇಳಿಕೆ ನೀಡಿದ್ದು ಭಾರಿ ವಿವಾದಕ್ಕೆ ಕಾರಣವಾಗಿದೆ.

Comments are closed.