ರಾಷ್ಟ್ರೀಯ

ಪೊಲೀಸ್ ಠಾಣೆಗೆ ನುಗ್ಗಿದ ಹೆಬ್ಬಾವು ! ಠಾಣೆ ತೊರೆದು ಓಡಿ ಹೋದ ಪೊಲೀಸರು

Pinterest LinkedIn Tumblr

python in Hyderabad

ಹೈದರಾಬಾದ್: ಬಂಜಾರಾ ಹಿಲ್ಸ್ ಪೊಲೀಸ್ ಠಾಣೆಯಲ್ಲಿ ಸಂಚಾರಿ ಪೊಲೀಸರು ಕಳೆದ ರಾತ್ರಿ ಐದು ಅಡಿ ಹೆಬ್ಬಾವನ್ನು ಕಂಡು ಉದ್ವಿಗ್ನ ಪರಿಸ್ಥಿತಿ ಉಂಟಾದ ಘಟನೆ ನಡೆದಿದೆ.

ನಡುರಾತ್ರಿ ಸುಮಾರು 2:30ಕ್ಕೆ ಪೊಲೀಸ್ ಠಾಣೆಯಲ್ಲಿ ಮೂರು ಜನ ಪೊಲೀಸರು ಕರ್ತವ್ಯ ನಿರತರಾಗಿದ್ದರು. ಮೊಬೈಲ್ ಫೋನಿನಲ್ಲಿ ಮಾತನಾಡಿಕೊಂಡು ಠಾಣೆಯಿಂದ ಹೊರಗೆ ಬರುತ್ತಿದ್ದ ಸಿಬ್ಬಂದಿ ಹೆಬ್ಬಾವೊಂದು ಠಾಣೆಯೊಳಗೆ ಬಂದಿದ್ದನ್ನು ಕಂಡು ಇತರ ಪೊಲೀಸರನ್ನು ಎಚ್ಚರಿಸದ್ದಾರೆ. ಆಗ ಎಲ್ಲರೂ ಠಾಣೆ ತೊರೆದು ಓಡಿ ಹೋಗಿದ್ದಾರೆ.

“ನಾವು ಕೂಡಲೇ ಸಂರಕ್ಷಕ ಗೆಳೆಯರಿಗೆ ಮಾಹಿತಿ ನೀಡಿದ್ದರಿಂದ ಅವರು ಬಂದು ಹಾವನ್ನು ರಕ್ಷಿಸಿದರು. ಠಾಣೆಯ ಬಳಿ ಕೆಲವು ಪೊದೆಗಳಿವೆ ಮತ್ತು ಹೆಬ್ಬಾವು ಅಲ್ಲಿಂದ ನುಸುಳಿರುವ ಸಾಧ್ಯತೆ ಇದೆ” ಎಂದು ಬಂಜಾರ ಹಿಲ್ಸ್ ಸಂಚಾರಿ ಇನ್ಸ್ಪೆಕ್ಟರ್ ಎಂ ವಿದ್ಯಾ ಸಾಗರ್ ಹೇಳಿದ್ದಾರೆ.

Comments are closed.