ಮನೋರಂಜನೆ

ಮತ್ತೆ ಒಂದಾಗಿರುವ ವಿರಾಟ್ ಕೊಹ್ಲಿಗಾಗಿ ಸುಲ್ತಾನ್ ಚಿತ್ರದ ವಿಶೇಷ ಪ್ರದರ್ಶನ ಆಯೋಜಿಸಲು ಮುಂದಾಗಿರುವ ಅನುಷ್ಕಾ!

Pinterest LinkedIn Tumblr

virat-anushka

ಮುಂಬೈ: ಅನುಷ್ಕಾ ಶರ್ಮಾ ತಮ್ಮ ಬಾಯ್ ಫ್ರೆಂಡ್ ವಿರಾಟ್ ಕೊಹ್ಲಿಗಾಗಿ ಸುಲ್ತಾನ ಚಿತ್ರದ ವಿಶೇಷ ಪ್ರದರ್ಶನ ಏರ್ಪಡಿಸಲು ತಯಾರಿ ನಡೆಸಿದ್ದಾರೆ ಎನ್ನಲಾಗಿದೆ.

ಅನುಶ್ಕಾ ಶರ್ಮಾ ಇದೇ ಮೊದಲ ಬಾರಿಗೆ ಕುಸ್ತಿ ಪಟುವಾಗಿ ಚಿತ್ರದಲ್ಲಿ ನಟಿಸುವ ಮೂಲಕ ತನ್ನ ವೃತ್ತಿ ಜೀವನದಲ್ಲೇ ಸವಾಲಿನ ಪಾತ್ರ ಮಾಡಿದ್ದಾರೆ. ಹಲವು ವಿಶೇಷತೆಗಳಿಂದ ಈಗಾಗಲೇ ಸುದ್ದಿಯಾಗಿರುವ ಸುಲ್ತಾನ್ ಚಿತ್ರವನ್ನು ನೋಡಲು ಅಭಿಮಾನಿಗಳು ಕಾತರರಾಗಿದ್ದಾರೆ. ಆದ್ದರಿಂದ ಚಿತ್ರದ ವಿಶೇಷ ಪ್ರದರ್ಶನವನ್ನು ಕೊಹ್ಲಿ ಜತೆಗೆ ನೋಡಲು ಅನುಷ್ಕಾ ಬಯಸಿದ್ದು, ಈ ಕುರಿತು ಯೋಜನೆ ರೂಪಿಸಿದ್ದಾರೆ ಎನ್ನಲಾಗಿದೆ.

ಜುಲೈ 5 ರಂದು ಬಿಡುಗಡೆಯಾಗುವ ಸುಲ್ತಾನ್ ಚಿತ್ರವನ್ನು ವಿರಾಟ್ ಕೊಹ್ಲಿ ಹೊರತುಪಡಿಸಿ, ಸಿನಿಮಾ ತಂಡದ ಐದು ಜನ ಸದಸ್ಯರಿಗೂ ವಿಶೇಷ ಪ್ರದರ್ಶನ ನೀಡಲು ಆಮಂತ್ರಣ ನೀಡಲಿದ್ದಾರೆ ಎಂದು ಹೇಳಲಾಗುತ್ತಿದೆ. ಈ ವಿಚಾರವಾಗಿ ಅನುಷ್ಕಾ ಚಿತ್ರ ನಿರ್ಮಾಣ ತಂಡದ ಜೊತೆಗೆ ಮೊದಲ ಹಂತದ ಮಾತುಕತೆ ನಡೆಸಿದ್ದಾರಂತೆ.

Comments are closed.