ನ್ಯೂಯಾರ್ಕ್: ಪ್ರತಿಯೊಬ್ಬರು ತಾವು ಹಾಗೂ ತಮ್ಮ ಮಕ್ಕಳ ಬುದ್ಧಿ ಚುರುಕಾಗಬೇಕೆಂದು ಬಯಸುತ್ತಾರೆ. ಅಲ್ಲದೆ ತಮ್ಮ ಕಣ್ಣುಗಳು ಯಾವುದೇ ದೃಷ್ಟಿದೋಷವಿಲ್ಲದೆ ಸದಾ ಕಾಲ ಉತ್ತಮವಾಗಿರಬೇಕು ಅಭಿಲಾಷೆಯಿರುತ್ತದೆ. ಹಾಗೆಂದುಕೊಂಡಿರುವವರಿಗೆ ಇಲ್ಲಿದೆ ಒಂದು ಉಪಯುಕ್ತ ಸಲಹೆ.
ಬೆರಿಹಣ್ಣುಗಳನ್ನು ಸೇವಿಸುವುದರಿಂದ ಬುದ್ಧಿ ಚುರುಕಾಗುವುದರ ಜೊತೆ ದೃಷ್ಟಿದೋಷ ಕೂಡ ನಿವಾರಣೆಯಾಗುತ್ತದೆ ಎಂದು ಹೊಸ ಸಂಶೋಧನೆಗಳಿಂದ ದೃಢಪಟ್ಟಿದೆ. ನಿತ್ಯವು ನೀವು ಬೆರಿ ಹಣ್ಣುಗಳನ್ನು ಸೇವಿಸುವುದರಿಂದ ನಿಮ್ಮ ಮೆದುಳು ಲವಲವಿಕೆಯಿಂದ ಕೆಲಸ ಮಾಡುವುದರೊಂದಿಗೆ ಕಣ್ಣಿನ ಸಮಸ್ಯೆಗಳು ಕಡಿಮೆಯಾಗುತ್ತವೆ ಎಂದು ಅಮೆರಿಕಾದ ಫ್ಲೋರಿಡಾ ವಿಶ್ವವಿದ್ಯಾಲಯದ ಆಹಾರ ಮತ್ತು ಕೃಷಿ ವಿಜ್ಞಾನ ಸಂಸ್ಥೆಯ ಸಂಶೋಧಕರು ವರದಿ ನೀಡಿದ್ದಾರೆ.
ಈ ವರದಿ ದೃಢಪಡುವಿಕೆಗೆ ಸಂಶೋಧಕರು 2 ಅಮೆರಿಕಾ ದೇಶದ 31 ರಾಜ್ಯಗಳ 2 ಸಾವಿರ ಮಂದಿಯನ್ನು ಸಮೀಕ್ಷೆಗೊಳಪಡಿಸಿದ್ದಾರೆ.
ಇದರಲ್ಲಿ ಸದಾ ಬೆರಿ ಹಣ್ಣುಗಳನ್ನು ತಿಂದವರ ಬುದ್ಧಿಮಟ್ಟ ಹೆಚ್ಚಾಗುವುದರ ಜೊತೆಗೆ ದೃಷ್ಟಿದೋಷವು ಸಾಕಷ್ಟು ನಿವಾರಣೆಯಾಗಿತ್ತು.
ಅಲ್ಲದೆ ಬೆರಿ ಹಣ್ಣು ಸೇವಿಸುವವರಿಂದ ತಿಳಿದು ಬಂದ ಮತ್ತೊಂದು ಅಂಶವೆಂದರೆ ಕ್ಯಾನ್ಸ್’ರ್ ಸಮಸ್ಯೆಗಳು, ಹೃದಯ ತೊಂದರೆಗಳು ಗುಣವಾಗಿದ್ದವು. ಇದು ಎಲ್ಲ ವಯಸ್ಸಿನವರಿಗೂ ಉಪಯುಕ್ತ ಎಂಬುದು ಗಮನಿಸಬೇಕಾದ ಅಂಶ.

Comments are closed.