ಬೆಂಗಳೂರು,ಜೂ.23: ಮಾದಕ ವಸ್ತು ಕಳ್ಳ ಸಾಗಣೆ ಮತ್ತು ಮಾರಾಟದ ಆರೋಪದ ಮೇಲೆ ಬೆಂಗಳೂರಿನ ಆರ್.ಟಿ ನಗರದಲ್ಲಿ ಕೇಂದ್ರ ಮಾದಕ ವಸ್ತು ನಿಯಂತ್ರಣ ಅಧಿಕಾರಿಗಳು ರೂಪದರ್ಶಿ ಸೇರಿ ನಾಲ್ವರನ್ನು ಬಂಧಿಸಲಾಗಿದೆ.
ಬಂಧಿತ ಆರೋಪಿ ರೂಪದರ್ಶಿ ಚಿಕ್ಕಮಗಳೂರು ಮೂಲದವರಾಗಿದ್ದು, ಹಲವು ವರ್ಷಗಳಿಂದ ಬೆಂಗಳೂರಿನ ಆರ್ಟಿ ನಗರದಲ್ಲಿ ವಾಸವಾಗಿದ್ದಳು. ಕಳೆದ ನವೆಂಬರ್30ರಂದು ಪೊಲೀಸರು ಆರ್ಟಿ ನಗರದ ಅಪಾರ್ಟ್ಮೆಂಟ್ವೊಂದರಲ್ಲಿ ಮೇಲೆ ದಾಳಿ ನಡೆಸಿ ಅಬ್ದುಲ್ ಖಾದರ್ ಎನ್ನುವ ಕಿಂಗ್ಪಿನ್ನನ್ನು ಬಂಧಿಸಿದ್ದರು.
ಈ ಪ್ರಕರಣ ತನಿಖೆ ಮುಂದುವರಿಸಿದ ಅಧಿಕಾರಿಗಳಿಗೆ ಮಾದಕ ವಸ್ತು ಮಾಫಿಯದಲ್ಲಿ ರೂಪದರ್ಶಿ ಕೈವಾಡ ಇರುವುದು ಕೇಳಿ ಬಂದಿದೆ. ಹೀಗಾಗಿ ಪೊಲೀಸರು ರೂಪದರ್ಶಿ ಸೇರಿದಂತೆ ನಾಲ್ವರ ಬಂಧಿಸಿ ವಿಚಾರಣೆ ನಡೆಸಿ ನ್ಯಾಯಾಧೀಶರ ಮುಂದೆ ಹಾಜರು ಪಡಿಸಿದ್ದಾರೆ.

Comments are closed.