ನವದೆಹಲಿ: ಭಾರತೀಯ ರಿಸರ್ವ್ ಬ್ಯಾಂಕ್ ಗವರ್ನರ್ ರಘುರಾಮ್ ರಾಜನ್ ನಂತರ ಅರವಿಂದ್ ಸುಬ್ರಹ್ಮಣ್ಯಂ ಸ್ವಾಮಿಯವರನ್ನು ವಜಾಗೊಳಿಸಬೇಕು ಎಂದು ಒತ್ತಾಯಿಸುತ್ತಿರುವ ಬಿಜೆಪಿ ಮುಖಂಡ ಸುಬ್ರಹ್ಮಣ್ಯಂ ಸ್ವಾಮಿ, ತಮ್ಮ ವಜಾಗೊಳಿಸುವ ಪಟ್ಟಿಯಲ್ಲಿ 27 ಜನರಿದ್ದಾರೆ ಎಂದು ಹೇಳಿದ್ದಾರೆ.
ಕಾಂಗ್ರೆಸ್ ಪಕ್ಷಕ್ಕೆ ನಿಷ್ಠರಾಗಿರುವ ಅಧಿಕಾರಿಗಳ ಪಟ್ಟಿಯನ್ನು ಸಿದ್ದಪಡಿಸಿರುವ ಸ್ವಾಮಿ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತದ ಮಾನ ಕಳೆದ ಅರವಿಂದ್ ಸುಬ್ರಹ್ಮಣ್ಯಂ ಅವರನ್ನು ವಜಾಗೊಳಿಸಬೇಕು ಎಂದು ಒತ್ತಾಯಿಸಿದರು.
ಭಾರತೀಯ ರಿಸರ್ವ್ ಬ್ಯಾಂಕ್ ಗವರ್ನರ್ ರಘುರಾಮ್ ರಾಜನ್, ಗ್ರೀನ್ ಕಾರ್ಡ್ ಹೋಲ್ಡರ್ ಆಗಿದ್ದರಿಂದ ಅವರು ಸಂಪೂರ್ಣ ಭಾರತೀಯರಲ್ಲ. ಆದ್ದರಿಂದ, ಅವರಿಗೆ ಭಾರತೀಯ ಆರ್ಥಿಕತೆಯ ಬಗ್ಗೆ ಮಾಹಿತಿಯಿಲ್ಲ. ಕೂಡಲೇ ಅವರನ್ನು ವಜಾಗೊಳಿಸಬೇಕು ಎಂದು ಗುಡುಗಿದ್ದರು.
ಅರವಿಂದ್ ಸುಬ್ರಮಣ್ಯಂ ಅಮೆರಿಕೆಗೆ ತೆರಳಿ ಕೆಲಸ ಮಾಡಲು ಬಯಸಿದ್ದಾರೆ. ಭಾರತ ಅಮೆರಿಕದ ಹಿತಾಸಕ್ತಿಯಂತೆ ಕಾರ್ಯನಿರ್ವಹಿಸುತ್ತಿಲ್ಲ ಎಂದು ಆರೋಪಿಸಿರುವುದು ನೋಡಿದಲ್ಲಿ ಇಂತಹ ವ್ಯಕ್ತಿ ಭಾರತದ ಆರ್ಥಿಕ ಸಲಹೆಗಾರರಾಗಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದ್ದಾರೆ.
ಜಿಎಸ್ಟಿ ಮಸೂದೆಯಲ್ಲಿ ಕಾಂಗ್ರೆಸ್ ಎತ್ತಿದ ಅನುಮಾನಗಳು ಚರ್ಚೆಗೆ ಅರ್ಹವಾಗಿವೆ ಎಂದು ಅರವಿಂದ್ ಸುಬ್ರಹ್ಮಣ್ಯಂ ಹೇಳಿಕೆ ನೀಡಿರುವುದು ಬಿಜೆಪಿ ಮುಖಂಡ ಸುಬ್ರಹ್ಮಣ್ಯಂ ಸ್ವಾಮಿಯವರಿಗೆ ಆಕ್ರೋಶ ಮೂಡಿಸಿದೆ.
Comments are closed.