ರಾಷ್ಟ್ರೀಯ

ಸೆಲ್ಫಿ ತೆಗೆದುಕೊಳ್ಳುವಾಗ ಗಂಗಾ ಬ್ಯಾರೆಜ್ಗೆ ಬಿದ್ದು 7 ವಿದ್ಯಾರ್ಥಿಗಳ ಸಾವು

Pinterest LinkedIn Tumblr

Ganga-riverಲಖನೌ: ಸೆಲ್ಫಿ ಗೀಳಿಗೆ ಬಿದ್ದ ಕಾಲೇಜು ವಿದ್ಯಾರ್ಥಿಗಳು ತಮ್ಮ ಜೀವವನ್ನೇ ಕಳೆದುಕೊಂಡಿರುವ ದಾರುಣ ಘಟನೆ ಕಾನ್ಪುರದಲ್ಲಿ ನಡೆದಿದೆ.
ಲಖನೌನ ಕಾನ್ಪುರ ಗಂಗಾ ಬ್ಯಾರೆಜ್ ಗೆ ಪಿಕ್ ನಿಕ್ ಗೆ ತೆರಳಿದ್ದ 10 ವಿದ್ಯಾರ್ಥಿಗಳ ಪೈಕಿ 7 ವಿದ್ಯಾರ್ಥಿಗಳು ತಮ್ಮ ಜೀವವನ್ನು ಕಳೆದುಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರತ್ಯಕ್ಷದರ್ಶಿಗಳ ಪ್ರಕಾರ ಪಿಕ್ ನಿಕ್ ಗೆ ಬಂದಿದ್ದ ವಿದ್ಯಾರ್ಥಿಗಳ ಪೈಕಿ ಸೆಲ್ಫಿ ತೆಗೆಯಲು ಮುಂದಾದ ವಿದ್ಯಾರ್ಥಿಯೊಬ್ಬ ತನ್ನ ನಿಯಂತ್ರಣ ಕಳೆದುಕೊಂಡು ಗಂಗಾ ಬ್ಯಾರೆಜ್ ಗೆ ಬಿದ್ದಿದ್ದಾನೆ ಕೂಡಲೆ ಆತನನ್ನು ಕಪಾಡಲು ಮತ್ತೊಬ್ಬ ಬ್ಯಾರೆಜ್ ಗೆ ದುಮುಕಿದ್ದಾನೆ ಹೀಗೆ ಒಬ್ಬರನ್ನೊಬ್ಬರನ್ನು ಕಾಪಾಡಲು ಬ್ಯಾರೆಜ್ ಗೆ ದುಮುಕಿ 7 ಮಂದಿ ಸಾವನ್ನಪ್ಪಿದ್ದಾರೆ.
ಸ್ಥಳೀಯ ಮೀನುಗಾರರ ಸಹಾಯದಿಂದ ಮೃತ ವಿದ್ಯಾರ್ಥಿಗಳ ಮೃತದೇಹವನ್ನು ಮೇಲಕ್ಕೆ ಎತ್ತಲಾಗಿದೆ. ಮೃತರನ್ನು ಸತ್ಯಂ, ಶಿವಂ, ರೋಹಿತ್, ಸಚಿನ್, ಸಂದೀಪ್, ಗೋಲು, ಮಂಜೂರ್ ಎಂದು ಗುರುತಿಸಲಾಗಿದೆ.

Comments are closed.