ರಾಷ್ಟ್ರೀಯ

ಶತಾಯುಷಿ ತಂದೆಯ ಅಂತ್ಯ ಕ್ರಿಯೆ ನಡೆಸಿದ ಲಿಂಗಾಂತರಿ ಪುತ್ರಿ

Pinterest LinkedIn Tumblr

funeral-pyre-600ವಡೋದರ : ಸಂಪ್ರದಾಯವನ್ನು ಲೆಕ್ಕಿಸಿದೆ, 55ರ ಹರೆಯದ ಲಿಂಗಾಂತರಿ ಮಹಿಳೆ ತನ್ನ ಶತಾಯುಷಿ ತಂದೆಯ ಅಂತ್ಯ ಕ್ರಿಯೆ ನಡೆಸಿದ ಘಟನೆ ಗುಜರಾತ್‌ನ ಪಂಚಮಹಲ್‌ ಜಿಲ್ಲೆಯಿಂದ ವರದಿಯಾಗಿದೆ.

ಪಂಚಮಹಲ್‌ ಜಿಲ್ಲೆಯ ನೆರೆಯ ಗೋಧ್‌ರಾ ತಾಲೂಕಿನ ಧನೋಲ್‌ ಗ್ರಾಮದ ನಿವಾಸಿಯಾಗಿರುವ ರೈತ ಹಾಗೂ ಬಡಗಿ, 100 ವರ್ಷ ಪ್ರಾಯದ ಸಮಂತ್‌ಸಿನ್‌ ಬಿ ಗೋಹಿಲ್‌ ಅವರ ಅಂತ್ಯ ಕ್ರಿಯೆಯನ್ನು ಅವರ ಲಿಂಗಾಂತರಿ ಪುತ್ರಿ ಪೂಜಾ ಮಾಸಿ ನಿನ್ನೆ ಮಂಗಳವಾರ ನೆರವೇರಿಸಿದಳು.

ಗೋಹಿಲ್‌ ಅವರಿಗೆ ಇಬ್ಬರು ಪತ್ನಿಯರು ಇದ್ದರು. ಇಬ್ಬರು ಮಕ್ಕಳಲ್ಲಿ ಒಬ್ಬಳು ಪೂಜಾ; ಇನ್ನೊಬ್ಬ ಮಗ. ಗೋಹಿಲ್‌ ಬದುಕಿದ್ದಾಗ ತನ್ನ ಅಂತ್ಯಕ್ರಿಯೆಯನ್ನು ಪುತ್ರಿ ಪೂಜಾ ಳೇ ನಡೆಸುವುದಕ್ಕೆ ಅನುವು ಮಾಡುವಂತೆ ತಮ್ಮ ಕುಟುಂಬ ಸದಸ್ಯರಲ್ಲಿ ಹೇಳಿದ್ದರು.

ಆ ಪ್ರಕಾರ ಪೂಜಾ ತನ್ನ ತಂದೆಯ ಶವ ಯಾತ್ರೆಯನ್ನು ತಾನೇ ಮುಂದೆ ನಿಂತು ನಡೆಸಿ ಬಳಿಕ ಆತನ ಚಿತೆಗೆ ತಾನೇ ಅಗ್ನಿ ಸ್ಪರ್ಶ ಮಾಡಿದಳು.

ಗೋಧ್‌ರಾದಲ್ಲಿ ಮೆಲ್ದಿ ಮಾತಾ ದೇವಿಯ ದೇವಸ್ಥಾನದಲ್ಲಿ ಪೂಜಾ ಅರ್ಚಕಿಯಾಗಿದ್ದಾಳೆ.
-ಉದಯವಾಣಿ

Comments are closed.