ಮಂಗಳೂರು: ಇವತ್ತು ಭಾರತಕ್ಕೆ ಹೆಮ್ಮೆಯ ದಿನ. ಪ್ರಧಾನಿ ನರೇಂದ್ರಮೋದಿ ಪರಿಕಲ್ಪನೆಗೆ ಜಾಗತಿಕ ಮನ್ನಣೆ ಸಿಕ್ಕ ಸುದಿನ. ಹೌದು ವ್ಯಕ್ತಿಯೊಬ್ಬನ ಒಳಗಿನ ಶಕ್ತಿಯನ್ನು ಒಂದು ಸಂತುಲಿತ ರೀತಿಯಲ್ಲಿ ಸುಧಾರಿಸಲು ಅಥವಾ ವೃದ್ಧಿಪಡಿಸಲು ಇರುವ ಏಕೈಕ ವಿಧಾನ ಅಂದ್ರೆ ಯೋಗ. ಈ ಯೋಗ ದಿನವನ್ನು ಇಂದು ವಿಶ್ವದ್ಯಂತ ಆಚರಿಸಲಾಗ್ತಿದೆ. ಹಾಗಾದ್ರೆ ಯೋಗ ದಿನಕ್ಕೆ ಜಾಗತಿಕ ಮನ್ನಣೆ ಸಿಕ್ಕಿದ್ದು ಯಾವಾಗ, ಎಲೆಲ್ಲಿ ಆಚರಿಸಲಾಗ್ತಿದೆ ಎನ್ನುವುದರ ಡೀಟೇಲ್ಸ್ ಇಲ್ಲಿದೆ
ಇವತ್ತು ಜೂನ್ 21, ಈ ದಿನ ಇಡೀ ಭಾರತಕ್ಕೆ ಒಂದು ರೀತಿಯ ಹೆಮ್ಮೆಯ ದಿನ. ಪ್ರಧಾನಿ ಮೋದಿ ಪರಿಕಲ್ಪನೆಯ ವಿಶ್ವ ಯೋಗ ದಿನಕ್ಕೆ ಜಾಗತಿಕ ಮನ್ನಣೆ ದೊರೆತ ಮಹತ್ವದ ದಿನವಿದು. ಈ ಯೋಗ ದಿನವನ್ನು ದೇಶ ಸೇರಿದಂತೆ ವಿಶ್ವದ ನೂರಾರು ರಾಷ್ಟ್ರಗಳಲ್ಲಿ ಇವತ್ತು ಯೋಗ ದಿನ ಆಚರಿಸಲಾಗಿತ್ತಿದೆ.
ವಿಶ್ವ ಯೋಗ ದಿನದ ಹಾದಿ..
ವಿಶ್ವಸಂಸ್ಥೆಯ 69ನೇ ಸಭೆಯಲ್ಲಿ ಅಂತಾರಾಷ್ಟ್ರೀಯ ಯೋಗ ದಿನದ ಪ್ರಸ್ತಾವನೆ ಮಂಡಿಸಲಾಯ್ತು. 2014ರ ಸೆ.27ರಂದು ಯುನೆಸ್ಕೋ ಸಭೆ ಉದ್ದೇಶಿ ಮಾತನಾಡಿದ್ದ ಪ್ರಧಾನಿ ಮೋದಿ, ಜೂನ್ 21ನ್ನು ವಿಶ್ವ ಅಂತಾರಾಷ್ಟ್ರೀಯ ಯೋಗ ದಿನ ಎಂದು ಘೋಷಿಸುವಂತೆ ಒತ್ತಾಯ ಮಾಡಿದ್ದರು. ಮೋದಿಯ ಈ ಪ್ರಸ್ತಾಪಕ್ಕೆ ವಿಶ್ವಸಂಸ್ಥೆಯ 177 ಸದಸ್ಯ ರಾಷ್ಟ್ರಗಳು ಬೆಂಬಲ ವ್ಯಕ್ತಪಡಿಸಿದ್ವು. ಬಳಿಕ 2014ರ ಡಿಸೆಂಬರ್ 11ರಂದು ಜೂನ್ 21ನ್ನು ವಿಶ್ವ ಯೋಗ ದಿನ ಎಂದು ವಿಶ್ವಸಂಸ್ಥೆ ಘೋಷಣೆ ಮಾಡ್ತು. ಬಳಿಕ 2015 ಜೂನ್ 21ರಂದು ವಿಶ್ವದಾದ್ಯಂತ ಮೊದಲ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯನ್ನು ಆಚರಿಸಲಾಯ್ತು.
ಇನ್ನೂ 2ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆಗೆ ಇಡೀ ವಿಶ್ವವೇ ಸಜ್ಜಾಗಿದೆ. ಈ ಬಾರಿ ಚೀನಾ, ಪ್ರಾನ್ಸ್ ಸೇರಿದಂತೆ 191 ರಾಷ್ಟ್ರಗಳು ಅಂತಾರಾಷ್ಟ್ರೀಯ ಯೋಗ ದಿನವನ್ನ ಆಚರಿಸುತ್ತದೆ.
ಯೋಗದಿಂದಾಗುವ ಪ್ರಯೋಜನಗಳು
ಮುಂಜಾನೆಯೇ ಯೋಗ ಮಾಡುವುದರಿಂದ ಹಲವು ಪ್ರಯೋಜನಗಳಿವೆ. ಯೋಗದಿಂದ ಮಾಂಸಖಂಡಗಳು ಬಲ ಪಡೆಯುತ್ತವೆ. ಕೈ ಮತ್ತು ಭುಜದ ಸ್ನಾಯುಗಳು ಶಕ್ತಿಯುತವಾಗುತ್ತವೆ. ಮನೋಬಲ ಮತ್ತು ಏಕಾಗ್ರತೆಯ ಶಕ್ತಿಯನ್ನು ಹೆಚ್ಚಿಸುತ್ತದೆ. ಯೋಗದಿಂದ ಖಿನ್ನತೆ, ಆತಂಕ, ಉದ್ವೇಗ ದೂರವಾಗುತ್ತೆ. ಯೋಗದಿಂದ ರೋಗನಿರೋಧಕ ಶಕ್ತಿ ವರ್ಧಿಸುತ್ತದೆ. ವೃದ್ಧಾಪ್ಯದ ಖಾಯಿಲೆಗಳಿಂದಲೂ ದೂರ ಇರಬಹುದು.

Comments are closed.