
ಮುಂಬೈ (ಐಎಎನ್‌ಎಸ್): ಅಭಿಷೇಕ್ ಚೌಬೆ ನಿರ್ದೇಶನದ ಬಾಲಿವುಡ್ ಸಿನಿಮಾ ‘ಉಡ್ತಾ ಪಂಜಾಬ್’ ಬಿಡುಗಡೆಯಾದ ಮೂರೇ ದಿನಗಳಲ್ಲಿ ₹ 33.80 ಕೋಟಿ ಬಾಚಿದೆ.
ಜೂನ್ 17ರಂದು ಸಿನಿಮಾ ಬಿಡುಗಡೆಯಾಗಿದ್ದು, ಮೊದಲ ದಿನ ₹ 10.05 ಕೋಟಿ ಗಳಿಸಿತ್ತು. ನಂತರ ಕ್ರಮವಾಗಿ ಶನಿವಾರ ₹ 11.25 ಕೋಟಿ ಮತ್ತು ಭಾನುವಾರ ₹ 12.50 ಕೋಟಿ ಗಳಿಸಿದೆ.
ಶಾಹಿದ್ ಕಪೂರ್ ಮತ್ತು ಅಲಿಯಾ ಭಟ್ ಮುಖ್ಯ, ಕರೀನಾ ಕಪೂರ್ ಮತ್ತಿ ದಲ್ಜಿತ್ ಸಿಂಗ್ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ. ‘ಉಡ್ತಾ ಪಂಜಾಬ್’ ಬಿಡುಗಡೆಗೂ ಮುನ್ನ ಸೆನ್ಸಾರ್ ಕಾರಣಕ್ಕಾಗಿ ತೀವ್ರ ವಿವಾದ ಸೃಷ್ಟಿಸಿತ್ತು.
Comments are closed.