ದೆಹಲಿ ಜೂ. 19 : ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲಿವುಡ್ ನಟ ಹೃತಿಕ್ ರೋಷನ್ ಮಾಜಿ ಪತ್ನಿ ಸುಸ್ಸಾನೆ ಖಾನ್ ರನ್ನು ಪಣಜಿ ಪೊಲೀಸರು ಬಂಧಿಸಿದ್ದಾರೆ. ಇಂಟೀರಿಯರ್ ಡಿಸೈನರ್ ಆಗಿರುವ ಸುಸ್ಸಾನೆ ಖಾನ್ 1.87ಕೋಟಿ ವಂಚನೆ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎಂದು ಆರೋಪಿಸಲಾಗಿದೆ. ರಿಯಲ್ ಎಸ್ಟೇಟ್ ಕಂಪನಿಯೊಂದಗೆ ಒಪ್ಪಂದ ಭದ್ರಪಡಿಸಿಕೊಳ್ಳುವ ಸಲುವಾಗಿ ತಾನು ವಾಸ್ತು ಶಿಲ್ಪಿ ಎಂದು ಸುಳ್ಳು ಹೇಳಿರುವುದಾಗಿ ಕಂಪನಿ ದೂರು ನೀಡಿದೆ.
ಅಲ್ಲದೆ ಆಕೆ ತಾನು ವಾಸ್ತು ಶಿಲ್ಪಿ ಎಂದು ಹೇಳಿಕೊಂಡು 2013ರಲ್ಲಿ ಒಪ್ಪಂದ ಮಾಡಿಕೊಂಡಿದ್ದ ಬರಹ ರೂಪದ ದಾಖಲೆಯನ್ನು ಬಿಡುಗಡೆ ಮಾಡಿದ್ದು,ನಿಗದಿತ ಅವದಿಯಲ್ಲಿ ಯೋಜನೆಯನ್ನು ಪೂರೈಸಲು ಸುಸ್ಸಾನೆ ವಿಫಲರಾಗಿದ್ದು, ವಂಚನೆ ಎಸಗಿದ್ದಾರೆ ಎಂದು ಕಂಪನಿ ಆರೋಪಿಸಿದೆ.
Comments are closed.