ಅಂತರಾಷ್ಟ್ರೀಯ

ಆಸ್ಟ್ರೇಲಿಯಾ ಗರ್ಭಿಣಿ ಹೊಟ್ಟೆಯಲ್ಲಿ ಕಾರು!

Pinterest LinkedIn Tumblr

carಆಸ್ಟ್ರೇಲಿಯಾದ ಗರ್ಭಿಣಿಯೊಬ್ಬಳ ಸ್ಕ್ಯಾನಿಂಗ್‌ ವರದಿ ಕಾರಿನ ಚಿತ್ರ ತೋರಿದೆ! ಹೌದು. 24 ವಾರಗಳ ಗರ್ಭಿಣಿ
ಆಲ್ಟ್ರಾಸೌಂಡ್‌ ಸ್ಕ್ಯಾನಿಂಗ್‌ಗಾಗಿ ತನ್ನ ಪತಿಯೊಂದಿಗೆ ಆಸ್ಪತ್ರೆಗೆತೆರಳಿದ್ದಳು. ಸ್ಕ್ಯಾನಿಂಗ್‌ನಲ್ಲಿ ಕಾರಿನ ಹೋಲಿಕೆಯಿರುವ ಚಿತ್ರ ಕಂಡುಬಂದಿದೆ. ಈ ಚಿತ್ರವನ್ನು ಜಾಲ ತಾಣಗಳಲ್ಲಿ ಹರಿಬಿಟ್ಟ ಪತಿ, “ನನ್ನ ಪತ್ನಿ ನ್ಪೋರ್ಟ್ಸ್ ಕಾರಿಗೆ ಗರ್ಭಿಣಿಯಾಗಿದ್ದಾಳೆ’ ಎಂದು ಅಡಿ ಬರಹ ನೀಡಿದ್ದಾರೆ. ಈ ಚಿತ್ರ ಈಗ ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಿದ್ಧವಾಗಿದೆ. ಈ ಚಿತ್ರ ನೋಡಿ ಗಲಿಬಿಲಿಗೊಂಡ ಮತ್ತು ವಿನೋದಗೊಂಡ ಬಳಕೆದಾರರಿಂದ ಹಾಸ್ಯಮಯ ಹೇಳಿಕೆಗಳನ್ನು ಚಿತ್ರಕ್ಕೆ ನೀಡುತ್ತಿದ್ದಾರೆ. ಅವರಲ್ಲಿ ಒಬ್ಬರು “ಇದು ಫೋರ್ಡ್‌ ಸ್ಟೇಟಸ್‌’ ಎಂದು ಮತ್ತೂಬ್ಬರು “ದ ಫಾಸ್ಟ್‌ ಆ್ಯಂಡ್‌ ದ ಸ್ಟೇಟಸ್’ ಎಂದು ಹೇಳಿಕೆಗಳನ್ನು ಲಗತ್ತಿಸಿದ್ದಾರೆ.
-ಉದಯವಾಣಿ

Comments are closed.