ರಾಷ್ಟ್ರೀಯ

ಇಲ್ಲಿ ಹಿಂದೂಗಳ ಮನೆಯಲ್ಲಿ ಉಪವಾಸ ಆಚರಣೆ…ಮುಸ್ಲಿಮರ ಮನೆಯಲ್ಲಿ ದೀಪಾವಳಿ ! ದೇಶದ ಸೌಹಾರ್ದತೆಗೆ ಮಾದರಿಯಾದ ಈ ಸ್ಥಳ …ಮುಂದೆ ಓದಿ

Pinterest LinkedIn Tumblr

32322

ಜೈಸಲ್ಮೇರ್: ಹಿಂದುಗಳ ಪವಿತ್ರ ಹಬ್ಬವಾದ ದೀಪಾವಳಿ ಸಂದರ್ಭದಲ್ಲಿ ಮುಸ್ಲಿಮರ ಮನೆಗಳಲ್ಲಿ ದೀಪಾಲಂಕಾರ ನೋಡಲು ಸಾಧ್ಯ. ಇಸ್ಲಾಮ್ ಧರ್ಮದ ಪವಿತ್ರ ಆಚರಣೆ ರಂಜಾನ್ ತಿಂಗಳಲ್ಲಿ ಹಿಂದುಗಳು ಭಕ್ತಿಯಿಂದ ರೋಜಾ ಆಚರಿಸುವುದನ್ನು ಕಾಣಬಹುದು. ಈ ರೀತಿ ಉಭಯ ಧರ್ಮಗಳ ಆಚರಣೆಯನ್ನು ಶೃದ್ಧೆಯಿಂದ ಆಚರಿಸಿ ದೇಶಕ್ಕೆ ಮಾದರಿಯಾಗಿರುವುದು ರಾಜಸ್ಥಾನದ ಜೈಸಲ್ಮೇರ್ ಹಾಗೂ ಬರ್ಮೇರ್ ಜಿಲ್ಲೆಯ ಗ್ರಾಮಗಳು.

ಹೌದು, ರಂಜಾನ್ನ ರೋಜಾ ಸಂದರ್ಭದಲ್ಲಿ ಹಿಂದುಗಳು ಪ್ರತಿ ನಿತ್ಯ ಐದು ಸಾರಿ ಮಸೀದಿಗೆ ತೆರಳಿ ನಮಾಜ್ ಸಲ್ಲಿಸುತ್ತಾರೆ. ಅಷ್ಟೇ ಅಲ್ಲ ಉಪವಾಸ ಕೂಡ ಆಚರಿಸುತ್ತಾರೆ. ಇನ್ನು ಹಿಂದುಗಳ ದೀಪಾವಳಿ, ಗಣೇಶ ಚತುರ್ಥಿಯಲ್ಲಿ ಮುಸ್ಲಿಮರ ಮನೆಗಳಲ್ಲಿ ಕೂಡ ಸಡಗರ ಕಾಣಬಹುದು. ಈ ರೀತಿಯ ವಿಶಿಷ್ಠ ಸಂಸ್ಕೃತಿ ಹೇಗೆ ನಡೆದುಕೊಂಡು ಬಂದಿತು ಎಂದು ಯಾರಿಗೂ ತಿಳಿದಿಲ್ಲ. ಭಾರತ ಹಾಗೂ ಪಾಕಿಸ್ತಾನದ ವಿಭಜನೆ ಕಾಲದಿಂದ ಈ ಸಂಪ್ರದಾಯ ನಡೆದುಕೊಂಡು ಬಂದಿರಬಹುದೆಂದು ಗ್ರಾಮಸ್ಥರ ನಂಬಿಕೆ. ಈ ಕುರಿತು ಡಾ. ಮೇಘರಾಮ್ ಗಧಿ್ವರ್ ಅವರು ಪ್ರತಿಕ್ರಿಯಿಸಿ, ಉಭಯ ಧರ್ಮದವರು ಧಾರ್ವಿುಕ ಆಚರಣೆಗಳಲ್ಲಿ ಪಾಲ್ಗೊಂಡು ವಿಧಿ ವಿಧಾನಗಳನ್ನು ಅತ್ಯಂತ ಸಂತೋಷದಿಂದ ಆಚರಿಸುತ್ತೇವೆ. ಅಷ್ಟೇ ಅಲ್ಲ ಕಷ್ಟ ಬಂದಾಗ ಕೂಡ ಪರಸ್ಪರ ಕೈ ಜೋಡಿಸಿ ಸಮಸ್ಯೆಗೆ ಪರಿಹಾರಕ್ಕೆ ಕಂಡುಕೊಳ್ಳುತ್ತೇವೆ ಎಂದು ತಿಳಿಸಿದ್ದಾರೆ.

ಎಲ್.ಎಂ. ಗಜಿ ಖಾನ್ ಮಾತನಾಡಿ, ನಾವು ಗಣೇಶೋತ್ಸವಗಳಲ್ಲಿ ಸಂಗೀತ ಕಾರ್ಯಕ್ರಮಗಳನ್ನು ನೀಡುತ್ತೇವೆ. ಇದು ಜಿಲ್ಲೆಯಾದ್ಯಂತ ಅತ್ಯಂತ ಜನಪ್ರಿಯವಾಗಿದ್ದು, ಹಿಂದುಗಳ ವಿವಾಹ ಸೇರಿದಂತೆ ಹಲವು ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ಗಾಯನ ಸುಧೆ ಹರಿಸುವುದಾಗಿ ತಿಳಿಸಿದ್ದಾರೆ.

Comments are closed.