ಮನೋರಂಜನೆ

ಮಮತಾ ಕುಲಕರ್ಣಿ ಮಾದಕ ದ್ರವ್ಯ ಜಾಲದ ಆರೋಪಿ, ಇಂಟರ್‌ಪೋಲ್‌ಗೆ ಮಾಹಿತಿ

Pinterest LinkedIn Tumblr

Mamta-Kulkarni-700ಥಾಣೆ : ಮಾಜಿ ಬಾಲಿವುಡ್‌ ನಟಿ ಮಮತಾ ಕುಲಕರ್ಣಿಯನ್ನು ಮಾದಕ ದ್ರವ್ಯ ಕಳ್ಳಸಾಗಣೆ ಜಾಲದ ಓರ್ವ ಆರೋಪಿ ಎಂದು ಥಾಣೆ ಪೊಲೀಸರು ಹೆಸರಿಸಿದ್ದಾರೆ.

ಮಮತಾ ಕುಲಕರ್ಣಿ ವಿರುದ್ಧ ನಾವು ಸಿಬಿಐ ಮೂಲಕ ಇಂಟರ್‌ ಪೋಲ್‌ಗೆ ರೆಡ್‌ ಕಾರ್ನರ್‌ ನೊಟೀಸ್‌ ಗಾಗಿ ಕೋರಿಕೆಯನ್ನು ಸಲ್ಲಿಸಲಿದ್ದೇವೆ ಎಂದು ಥಾಣೆ ಪೊಲೀಸ್‌ ಅಧಿಕಾರಿ ಪರಮ್‌ವೀರ್‌ ಸಿಂಗ್‌ ಹೇಳಿದ್ದಾರೆ.

ಮಾದಕ ದ್ರವ್ಯ ಕಳ್ಳಸಾಗಣೆ ಜಾಲದಲ್ಲಿ ಮಮತಾ ಕುಲಕರ್ಣಿ ಮತ್ತು ಆಕೆಯ ಗಂಡ ವಿಕ್ಕಿ ಗೋಸ್ವಾಮಿ ಯೊಂದಿಗೆ ಸಂಪರ್ಕದಲ್ಲಿರುವ ಬಾಲಿವುಡ್‌ನ‌ ಇತರ ಕೆಲವರ ಬಗ್ಗೆಯೂ ನಾವು ತನಿಖೆ ನಡೆಸುತ್ತಿದ್ದೇವೆ ಎಂದು ಪರಮ್‌ವೀರ್‌ ಸಿಂಗ್‌ ಹೇಳಿದ್ದಾರೆ.

ಮಮತಾ ಕುಲಕರ್ಣಿಯ ಪತಿ ವಿಕ್ಕಿ ಗೋಸ್ವಾಮಿ ಅಂತಾರಾಷ್ಟ್ರೀಯ ಮಾದಕ ದ್ರವ್ಯ ಜಾಲದ ಕಿಂಗ್‌ ಪಿನ್‌ ಆಗಿದ್ದು ಆತನನ್ನು ಪೊಲೀಸರು ಈಗಾಗಲೇ ಮುಖ್ಯ ಆರೋಪಿ ಎಂದು ಗುರುತಿಸಿದ್ದಾರೆ. ಮಮತಾ ಕುಲಕರ್ಣಿ ಬ್ಯಾಂಕ್‌ ಖಾತೆಗಳನ್ನು ಹಾಗೂ ಹೂಡಿಕೆ ದಾಖಲೆಗಳನ್ನು ಪೊಲೀಸರು ಪರಿಶೀಲಿಸುತ್ತಿದ್ದಾರೆ.

ಕಳೆದ ಎಪ್ರಿಲ್‌ ಕೊನೆಯ ವಾರದಲ್ಲಿ ಥಾಣೆ ಪೊಲೀಸರು 18.5 ಟನ್‌ ಎಫ‌ರ್‌ಡೈನ್‌ ಮತ್ತು 2.5 ಟನ್‌ ಅಸೆಟಿಕ್‌ ಎನಿಡ್ರೈಡ್‌ ಮಾದಕ ದ್ರವ್ಯವನ್ನು ವಶಪಡಿಸಿಕೊಂಡಿದ್ದರು. ಈ ಪ್ರಕರಣದ ತನಿಖೆಯಲ್ಲಿ ಮಮತಾ ಕುಲಕರ್ಣಿ ಪತಿ ವಿಕ್ಕಿ ಗೋಸ್ವಾಮಿ ಈ ಜಾಲದ ಕಿಂಗ್‌ ಪಿನ್‌ ಎಂಬುದನ್ನು ಕಂಡುಕೊಳ್ಳಲಾಗಿತ್ತು.

ಕೀನ್ಯ ಪೊಲೀಸ್‌ ಅಧಿಕಾರಿಗಳಿಂದ ಬಂಧಿತನಾಗಿದ್ದ ವಿಕ್ಕಿ ಗೋಸ್ವಾಮಿ ಈಗ ಜಾಮೀನಿನಲ್ಲಿ ಹೊರಗಿದ್ದಾನೆ.ಆತನನ್ನು ಕೀನ್ಯದಿಂದ ಬೇಗನೆ ಭಾರತಕ್ಕೆ ಗಡೀಪಾರು ಮಾಡಲಾಗುವುದು ಎಂದು ಗೊತ್ತಾಗಿದೆ.
-ಉದಯವಾಣಿ

Comments are closed.