
ಮುಂಬೈ: ಬಾಲಿವುಡ್‍ನ ಫ್ಯಾಷನ್ ಕ್ವೀನ್ ಸೋನಂ ಕಪೂರ್ ಅಂದ್ರೆ ತಪ್ಪಾಗಲ್ಲ. ಯಾಕಂದ್ರೆ ಹಲವು ಬಾರಿ ಸೋನಂ ವಿಭಿನ್ನ ಸ್ಟೈಲ್‍ನಿಂದಲೇ ಜನರ ಗಮನ ಸೆಳೆದಿದ್ದಾರೆ. ಆದ್ರೆ ಇಂತಹ ಸ್ಟೈಲಿಷ್ ಸೋನಂಗೆ ಕೂದಲು ತೆಗೆಸೋ ಆಸೆಯಂತೆ.
ಹೌದು. ಸಿನಿಮಾದಲ್ಲಿ ಯಾವುದಾದರೂ ನಟಿ ಪಾತ್ರಕ್ಕಾಗಿ ಬಾಲ್ಡ್ ಮಾಡ್ಸಿದ್ರೆ ಅವರ ಡೆಡಿಕೇಷನ್‍ಗೆ ಎಲ್ಲರೂ ತಲೆ ಬಾಗ್ತಾರೆ. ಇದೀಗ ಸೋನಂ ಕಪೂರ್ ಯಾವುದಾದರೂ ಚಿತ್ರದಲ್ಲಿ ಬಾಲ್ಡ್ ಮಾಡಿಸುವ ಪಾತ್ರ ಸಿಕ್ಕಿದ್ರೆ ತಲೆ ಕೂದಲನ್ನ ತೆಗೆಸುವುದಾಗಿ ಹೇಳಿಕೆ ನೀಡಿದ್ದಾರೆ.
ಈಗಾಗಲೇ ಸಂಜಯ್ ಲೀಲಾ ಬನ್ಸಾಲಿ ಅವರ ಮುಂದಿನ ಚಿತ್ರ ಸರಸ್ವತಿ ಚಂದ್ರಕ್ಕೆ ಸೋನಂಗೆ ಆಫರ್ ನೀಡಲಾಗಿದ್ದು, ಇದಕ್ಕಾಗಿ ಸೋನಂ ಕೂದಲು ತೆಗೆಸೋಕೆ ಓಕೆ ಅಂದಿದ್ದಾರೆ ಎಂದು ಹೇಳಲಾಗುತ್ತಿದೆ. ಒಟ್ಟಿನಲ್ಲಿ ಬಿ ಟೌನ್ ಬೆಡಗಿಯರು ವಿಭಿನ್ನ ಪಾತ್ರಕ್ಕಾಗಿ ಯಾವುದೇ ತ್ಯಾಗಕ್ಕೂ ಸಿದ್ದ ಎನ್ನುವುದು ಸಾಬೀತಾಗಿದೆ.
Comments are closed.