
ಆಗ್ರಾ: ಸರ್ಕಾರಗಳು ಹೆಣ್ಣು ಭ್ರೂಣ ಹತ್ಯೆ ತಡೆಯಲು ಕಠಿಣ ಕಾನೂನುಗಳನ್ನು ತಂದರೂ ವೈದ್ಯರು ರಂಗೋಲಿ ಅಡಿ ತೂರಿಕೊಂಡು ಎಗ್ಗಿಲ್ಲದೇ ಕೋಡ್ ವರ್ಡ್ಗಳನ್ನು ಬಳಸಿಕೊಂಡು ತಮ್ಮ ಈ ದಂಧೆಯನ್ನು ಮಂದುವರೆಸುತ್ತಿದ್ದಾರೆ.
ಕೆಲ ದಿನಗಳ ಹಿಂದೆ ಉತ್ತರಪ್ರದೇಶ ಆಗ್ರಾದ ಹಿರಿಯ ರೇಡಿಯಾಲಜಿ ತಜ್ಞ ಡಾ. ಅಮಿತ್ ಕುಮಾರ್ ಎಂಬಾತನ ಆಲ್ಟ್ರಾಸೌಂಡ್ ಸೆಂಟರ್ ಮೇಲೆ ದಾಳಿ ಮಾಡಿತ್ತು. ವಿಚಾರಣೆ ವೇಳೆ ಗರ್ಭಿಣಿಯರನ್ನು ಕರೆತಂದ ಎಜೆಂಟಿಗೆ ಈ ಕೇಂದ್ರ 7 ರಿಂದ 10 ಸಾವಿರ ರೂ. ಕಮಿಷನ್ ನೀಡುತ್ತಿರುವ ವಿಚಾರ ಬೆಳಕಿಗೆ ಬಂದಿದೆ.
ಆಗ್ರಾದಲ್ಲಿ ಒಟ್ಟು 275 ಆಲ್ಟ್ರಾ ಸೌಂಡ್ ಯಂತ್ರಗಳು ನೋಂದಣಿಯಾಗಿದ್ದು, ಬಹುತೇಕ ವೈದ್ಯರು ಹಣಕ್ಕಾಗಿ ಭ್ರೂಣ ಹತ್ಯೆ ಮಾಡುತ್ತಿರುವ ವಿಚಾರ ಬೆಳಕಿಗೆ ಬಂದಿದೆ.
4 ವಾರ ಬೆಳೆದ ಭ್ರೂಣವನ್ನು ಸ್ತ್ರೀರೋಗ ತಜ್ಞರಾಗಿರುವ ಹಿರಿಯ ವೈದ್ಯರು ಸಕಾರಣವನ್ನು ತಿಳಿದು ತೆಗೆಯಬೇಕು ಎನ್ನುವ ಕಾನೂನು ಇದ್ದರೂ 12 ತಿಂಗಳು ಬೆಳೆದ ಭ್ರೂಣವನ್ನು ಅನನುಭವಿ ವೈದ್ಯರು ತೆಗೆಯುತ್ತಿದ್ದಾರೆ ಎನ್ನುವ ಅಂಶವೂ ಬೆಳಕಿಗೆ ಬಂದಿದೆ.
ನಮ್ಮ ಈ ಕಳ್ಳ ವ್ಯವಹಾರ ಬೇರೆಯವರಿಗೆ ತಿಳಿಯಬಾರದು ಎನ್ನುವುದಕ್ಕೆ ಗಂಡುಮಗುವಿಗೆ ‘ಗಣೇಶ’ ಎಂದು ಹೆಣ್ಣು ಮಗುವಿಗೆ ‘ಲಕ್ಷ್ಮಿ’ ಎಂದು ಸಂಬೋಧಿಸಿ ವ್ಯವಹಾರ ಮಾಡುತ್ತೇವೆ ಎಂದು ಡಾ. ಅಮಿತ್ ವಿಚಾರಣೆ ವೇಳೆ ಹೇಳಿಕೊಂಡಿದ್ದಾನೆ.
ಉತ್ತರಪ್ರದೇಶದಲ್ಲಿ ಭ್ರೂಣ ಹತ್ಯೆ ವಿಚಾರ ಅಧಿಕಾರಿಗಳಿಗಳಿಗೆ ತಿಳಿದಿದ್ದರೂ, ಈ ಕಳ್ಳ ವ್ಯವಹಾರದಲ್ಲಿ ಅವರಿಗೂ ಪಾಲು ಹೋಗುತ್ತಿರುವುದರಿಂದ ಭ್ರೂಣ ಹತ್ಯೆ ಎಗ್ಗಿಲ್ಲದೇ ನಡೆಯುತ್ತಿದೆ.
Comments are closed.