
ತಿರುವನಂತಪುರಂ: ಕೇರಳದ ಕ್ಯಾಲಿಕಟ್‍ನ ಜಿಲ್ಲಾಧಿಕಾರಿಯೊಬ್ಬರು ಶಾಲೆ ನಡೆಸಲು ತಮ್ಮ ಕಚೇರಿಯನ್ನೇ ಮಕ್ಕಳಿಗೆ ಬಿಟ್ಟುಕೊಟ್ಟು ಹೃದಯ ವೈಶಾಲ್ಯತೆ ಮೆರೆದಿದ್ದಾರೆ.
ಇಲ್ಲಿನ ಮಲಪರಂಬ ಹಿರಿಯ ಪ್ರಾಥಮಿಕ ಶಾಲೆಯನ್ನು ಮುಚ್ಚುವಂತೆ ಆದೇಶಿಸಿ ಸುಪ್ರೀಂ ಕೋರ್ಟ್ ತೀರ್ಪು ಪ್ರಕಟಿಸಿತ್ತು. ಇದರಿಂದಾಗಿ ಮಕ್ಕಳ ವಿದ್ಯಾಭ್ಯಾಸ ಹಾಳಾಗುತ್ತದೆ ಎಂದು ಶಿಕ್ಷಕರು ಆತಂಕಕ್ಕೀಡಾಗಿದ್ದರು. ಹೀಗಾಗಿ ಜಿಲ್ಲಾಧಿಕಾರಿ ಎನ್ ಪ್ರಶಾಂತ್ ತಮ್ಮ ಕಚೇರಿಯ ಒಂದು ಭಾಗವನ್ನು ಖಾಲಿ ಮಾಡಿ ಅಲ್ಲೇ ಮಕ್ಕಳಿಗೆ ಪಾಠ ಮಾಡುವಂತೆ ಶಿಕ್ಷಕರಿಗೆ ಹೇಳಿದ್ದಾರೆ. ಈ ಹಿಂದೆ ಪ್ರಶಾಂತ್ ಬಡವರಿಗೆ ಉಚಿತ ಊಟದ ಕೂಪನ್ ನೀಡುವ ವ್ಯವಸ್ಥೆಯನ್ನೂ ಮಾಡಿದ್ದರು.
ಅನುದಾನಿತ ಶಾಲೆಯಾದ ಮಲಪರಂಬ ಶಾಲೆ ಆರ್‍ಟಿಇ ಅಡಿಯಲ್ಲಿ ನೋಂದಣಿಯಾಗಿರಲಿಲ್ಲ. ಹೀಗಾಗಿ ಈ ಶಾಲೆಯ ಮ್ಯಾನೇಜರ್ ಒಂದು ವರ್ಷದ ನೋಟಿಸ್ ನೀಡಿ ಶಾಲೆಯನ್ನು ಮುಚ್ಚುವುದಾಗಿ ಹೇಳಿದ್ದರು. ಇದನ್ನು ವಿರೋಧಿಸಿ ಶಾಲೆಯ ಶಿಕ್ಷಕರು ಹಾಗು ಪೋಷಕರು ಕೇರಳ ಹೈ ಕೋರ್ಟ್ ಮೆಟ್ಟಿಲೇರಿದ್ದರು. ಆರ್‍ಟಿಇ ಅಡಿ ನೋಂದಣಿಯಾಗದ ಶಾಲೆಯನ್ನು ನಡೆಸಲು ಅನುಮತಿ ಇಲ್ಲ. ಶಾಲೆಯನ್ನು ಆರ್‍ಟಿಇ ಕಾಯ್ದೆಯಡಿ ಘೋಷಿಸಿಕೊಳ್ಳುವುದು ಮ್ಯಾನೇಜರ್‍ನ ಕರ್ತವ್ಯ ಎಂದು ಹೇಳಿ ಶಿಕ್ಷಕರ ಅರ್ಜಿಯನ್ನು ತಿರಸ್ಕರಿಸಿತ್ತು. ಸುಪ್ರೀಂ ಕೋರ್ಟ್ ಕೂಡ ಹೈ ಕೋರ್ಟ್‍ನ ತೀರ್ಪನ್ನು ಎತ್ತಿಹಿಡಿದಿತ್ತು.
Comments are closed.