ಮನೋರಂಜನೆ

ಅಂತರ್ಜಾಲದಲ್ಲಿ ಕಿಚ್ಚು ಹಚ್ಚಿಸಿರುವ ‘ಕಬಾಲಿ’ ಸಿನೆಮಾದ ‘ನೆರುಪ್ಪ ಡಾ’ ಹಾಡಿನ ಟೀಸರ್

Pinterest LinkedIn Tumblr

Kabaliಚೆನ್ನೈ: ತಮಿಳು ಸೂಪರ್ ಸ್ಟಾರ್ ರಜನಿಕಾಂತ್ ಅನಾರೋಗ್ಯದಿಂದ ಬಳಲುತ್ತಿದ್ದಾರೆ ಎಂಬ ಸುಳ್ಳು ವದಂತಿಗಳ ನಡುವೆ ಅವರ ಮುಂದಿನ ಚಿತ್ರ ‘ಕಬಾಲಿ’ ಸಿನೆಮಾದ ‘ನೆರುಪ್ಪ ಡಾ’ ಹಾಡಿನ ಟೀಸರ್ ಅನ್ನು ಬಿಡುಗಡೆ ಮಾಡಿದ್ದು ಅಂತರಜಾಲದಲ್ಲಿ ವೈರಲ್ ಆಗಿ ಬಹುಚರ್ಚಿತ ವಿಷಯವಾಗಿದೆ.
ರಜನಿಕಾಂತ್ ಅವರ ಸ್ಟೈಲಿಶ್ ಅವತಾರವನ್ನು ತೋರಿಸಿ ಅಭಿಮಾನಿಗಳಿಗೆ ಕಿಚ್ಚು ಹತ್ತಿಸಿರುವ ಈ ಟ್ರೇಲರ್ ಬಿಡುಗಡೆಯಾದ ಮೂರು ಘಂಟೆಗಳಲ್ಲಿ ೧೦ಲಕ್ಷಕ್ಕೂ ಹೆಚ್ಚು ಬಾರಿ ವೀಕ್ಷಣೆಗೊಂಡಿದೆ.
ಈ ಟ್ರೇಲರ್ ನಲ್ಲಿ ಸಿನೆಮಾದ ಮುಖ್ಯ ವಿಲನ್ ತೈವಾನ್ ನಟ ವಿನ್ಸ್ಟನ್ ಚಾವೋ ಅವರನ್ನು ಪರಿಚಯಿಸುತ್ತದೆ.
ಪ ರಂಜಿತ್ ನಿರ್ದೇಶನದ ಈ ಚಿತ್ರದಲ್ಲಿ ದಾನಿಷ್ಕಾ, ರಿತ್ವಿಕಾ, ಕಿಶೋರ್, ದಿನೇಶ್, ರಾಧಿಕಾ ಆಪ್ಟೆ ಕೂಡ ನಟಿಸಿದ್ದು, ಸಿನೆಮಾ ಜಾಗತಿಕವಾಗಿ ಜುಲೈ ೧೫ಕ್ಕೆ ಬಿಡುಗಡೆಯಾಗಲಿದೆ.

Comments are closed.