ಬ್ರೆಜಿಲಿಯಾ: ಬೆಂಕಿ ಜೊತೆಗೆ ಸಾಹಸ ಮಾಡಿರೋದನ್ನ ನೋಡಿರ್ತೀರಾ, ಹಾವಿನ ಜೊತೆ ಸಾಹಸ ಮಾಡಿರೋದನ್ನ ನೋಡಿರ್ತೀರಾ. ಆದ್ರೆ ಇಲ್ಲೊಬ್ಬ ಹಾವು, ಬೆಂಕಿ ಎರಡರ ಜೊತೆ ಸಾಹಸ ಮಾಡಿದ್ದಾನೆ.
ಹೌದು. ಬ್ರೆಜಿಲ್‍ನ ಸಾಹಸಿಯೊಬ್ಬ ಇಲ್ಲಿನ ಬೆಲೆಮ್‍ನಲ್ಲಿರುವ ಮಳೆಕಾಡಿನಲ್ಲಿ ವಿಚಿತ್ರಸಾಹಸವೊಂದನ್ನ ಮಾಡಿದ್ದು, ಗಾಜಿನ ಚೂರುಗಳನ್ನು ಹಾಕಿದ್ದ ಬಾಕ್ಸಿನಲ್ಲಿ ಕೂತ ಸಾಹಸಿಯ ಕೈಗಳನ್ನು ಬೀಗದಿಂದ ಲಾಕ್ ಮಾಡಲಾಗಿದೆ. ಜೊತೆಗೊಂದು ಹಾವನ್ನು ಬಿಡಲಾಗಿತ್ತು. ಇದಾದ ಬಳಿಕ ಇನ್ನೊಬ್ಬಾತ ಬಾಕ್ಸನ್ನ ಸಂಪೂರ್ಣವಾಗಿ ಮುಚ್ಚಿ ಅದರ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಅಪಾಯಕಾರಿ ಸಹಾಸ ಮಾಡಿದ್ದರು.
ಬೆಂಕಿಯಲ್ಲಿ ಬಾಕ್ಸ್ ಧಗಧಗನೇ ಉರಿದ ಮೇಲೆ ಹೊರಗಿದ್ದವನು ಬಾಕ್ಸ್ ತೆಗೆದಾಗ ಸಾಹಸಿಗಿರಲಿ, ಹಾವಿಗೂ ಏನೂ ಆಗಿರಲಿಲ್ಲ. ಬದಲಾಗಿ ತನ್ನ ಕೈಯನ್ನ ಬಿಚ್ಚಿಕೊಂಡಿದ್ದ ಆತ ಹಾವನ್ನ ಕುತ್ತಿಗೆಗೆ ಸುತ್ತಿಕೊಂಡಿದ್ದ. ಇದರಲ್ಲಿ ಆತ ಅದ್ಯಾವ ಟ್ರಿಕ್ಸ್ ಬಳಸಿದ್ನೋ ಗೊತ್ತಿಲ್ಲ. ಆದ್ರೆ ಸ್ವಲ್ವವೂ ಅಪಾಯ ಮಾಡಿಕೊಳ್ಳದೇ ತನ್ನ ಈ ವಿಚಿತ್ರ ಸಾಹಸದಲ್ಲಿ ಯಶಸ್ವಿಯಾಗಿದ್ದಾನೆ.
Comments are closed.