ದೆಹಲಿ,: ‘ಧಕ್ ಧಕ್’ ಬೆಡಗಿ ಮಾಧುರಿ ದೀಕ್ಷಿತ್ ಇನ್‌ಸ್ಟಾಗ್ರಾಮ್‌ನಲ್ಲೂ ತಮ್ಮ ಕಮಾಲ್ ಮಾಡಿದ್ದಾರೆ. 2 ಮಿಲಿಯನ್ ಪಾಲೋವರ್ಸ್ ಹೊಂದುವ ಮೂಲಕ ನಟಿ ಮಾಧುರಿ ದೀಕ್ಷಿತ್ ಇನ್‌ಸ್ಟಾಗ್ರಾಮ್‌ನಲ್ಲೂ ಹಲವು ಅಭಿಮಾನಿಗಳ ಮನ ಗೆದಿದ್ದಾರೆ. ಇಂದಿಗೂ ಮಾಧುರಿ ಅವರನ್ನು ಅದೆಷ್ಟು ಜನ್ರು ಲೈಕ್ ಮಾಡ್ತಾರೆ ಎಂಬುದಕ್ಕೆ ಇದೇ ಉದಾಹರಣೆಯಾಗಿದೆ.
‘ಹಮ್ ಆಪಕೇ ಹೇ ಕೌನ್’ ಚಿತ್ರದ ನಟಿ ಮಾಧುರಿ ದೀಕ್ಷಿತ್ ತಮ್ಮ ವಿಡಿಯೋವನ್ನು ಶೇರ್ ಮಾಡಿದ್ದಾರೆ. ತಮ್ಮ ಅಭಿಮಾನಿಗಳಿಗೆ ಕೃತಜ್ಞತೆ ಸಲ್ಲಿಸಿರುವ ನಚಿ ಮಾಧುರಿ, ನಿಮ್ಮ ಎಲ್ಲಾ ಪ್ರೀತಿಗೆ, ಪ್ರೋತ್ಸಾಹಕ್ಕೆ ಥ್ಯಾಂಕ್ಸ್ ಎಂದು ಬರೆದುಕೊಂಡಿದ್ದಾರೆ.
ಅಲ್ಲದೇ ವಿಡಿಯೋದಲ್ಲಿ ಮಾಧುರಿ ಹಾಯ್, 2 ಮಿಲಿಯನ್, ‘ಹೋ ಮೈ ಗಾಡ್’, ನಾನು ತುಂಬಾ ಥ್ರೀಲ್ ಹಾಗೂ ಉತ್ಸುಕಳಾಗಿದ್ದೇನೆ ಎಂದ ಮಾಧುರಿ, ಥ್ಯಾಂಕೂ ಫಾರ್ ಆಲ್ ಲವ್ ಆಂಡ್ ಸಂಪೋರ್ಟ್ ಎಂದು ತಿಳಿಸಿದ್ದಾರೆ.
49 ವರ್ಷದ ಮಾಧುರಿ ದೀಕ್ಷಿತ್ ಬಾಲಿವುಡ್ ಹಲವು ಹಿಟ್ ಸಿನಿಮಾಗಳನ್ನು ನೀಡಿದ ನಟಿ… ‘ಹಮ್ ಆಪ್ ಕೇ ಹೇ ಕೌನ್’, ‘ದೇವದಾಸ್’, ‘ದಿಲ್ ತೋ ಪಾಗಲ್ ಹೇ’, ‘ಕೋಯಲಾ’, ಅಲ್ಲದೇ ಡ್ಯಾನ್ಸ್ ರಿಯಾಲಿಟಿ ಶೋ ವನ್ನು ಹೋಸ್ಟ್ ಮಾಡುತ್ತಿದ್ದಾರೆ. ಯು ‘ಥಿಂಕ್ ಯೂ ಕ್ಯಾನ್ ಡ್ಯಾನ್ಸ್’, ‘ಅಬ್ ಇಂಡಿಯಾ ಕೀ ಬಾರಿ’,ಗಳಲ್ಲಿ ಮಾಧುರಿ ಹೋಸ್ಟ್ ಆಗಿ ಕಾಣಿಸಿಕೊಂಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ
Comments are closed.