ಕರಾವಳಿ

ಕೋಟ: ಅಂಡರ್‌ಪಾಸ್ ಮೇಲ್ಭಾಗದಲ್ಲಿ ಬಸ್ ಪಲ್ಟಿ; ಪ್ರಯಾಣಿಕರು ಪಾರು; ತಪ್ಪಿದ ಬಾರೀ ಅನಾಹುತ

Pinterest LinkedIn Tumblr

ಉಡುಪಿ: ಗುರುವಾರ ಬೆಳಿಗ್ಗೆ ಕೋಟ ರಾಷ್ಟ್ರೀಯ ಹೆದ್ದಾರಿ 66ರಲ್ಲಿರುವ ಅಂಡರ್‌ಪಾಸ್ ಮೇಲ್ಭಾಗದಲ್ಲಿ ಖಾಸಗಿ ಬಸ್‌ವೊಂದು ಪಲ್ಟಿ ಹೊಡೆದು ಬಹುಕಾಲ ಟ್ರಾಫಿಕ್ ಜಾಮ್ ಉಂಟಾಯಿತು. ಕುಂದಾಪುರದಿಂದ ಬರುತ್ತಿದ್ದ ಖಾಸಗಿ ಬಸ್ ಅತೀ ವೇಗದ ಹಿನ್ನೆಲೆಯಲ್ಲಿ ಚಾಲಕನ ನಿಯಂತ್ರಣ ತಪ್ಪಿದ ಹಿನ್ನಲೆಯಲ್ಲಿ ಘಟನೆ ನಡೆದಿದ್ದು ಬಸ್‌ನಲ್ಲಿದ್ದ  ಪ್ರಯಾಣಿಕರು, ಬಸ್ ಚಾಲಕ ಮತ್ತು ನಿರ್ವಾಹಕ ಸಣ್ಣ ಪುಟ್ಟ ಗಾಯಗೊಂಡು ಅಪಾಯದಿಂದ ಪಾರಾಗಿದ್ದಾರೆ.

KOta_Bus Pulty_News (1) KOta_Bus Pulty_News (2) KOta_Bus Pulty_News (3) KOta_Bus Pulty_News (4) KOta_Bus Pulty_News (5) KOta_Bus Pulty_News (6)

ಗುರುವಾರದ ಕುಂದಾಪುರದಿಂದ ಮಂಗಳೂರಿಗೆ ತೆರಳುತ್ತಿದ್ದ ಖಾಸಗಿ ಬಸ್ ಕೋಟ ಅಂಡರ್ ಪಾಸ್ ಮೇಲೆ, ಲಾರಿಯೊಂದನ್ನು ಓವರಟೇಕ್ ಮಾಡುವ ಭರದಲ್ಲಿ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿ ಹೊಡೆದಿದೆ. ಅತೀ ವೇಗ ಮತ್ತು ಅಜಾಗರೂಕತೆಯಿಂದ ಬಸ್ ಚಲಾಯಿಸಿ ಬಂದ ಕಾರಣ, ಓವರಟೇಕ್ ಮಾಡುವ ಭರದಲ್ಲಿ ಅಂಡರ್‌ಪಾಸ್ ಮೇಲ್ಭಾಗದಲ್ಲಿದ್ದ ಸೈಡ್ ಕಾಂಕ್ರೀಟ್ ಬ್ಯಾರಿಕೇಡ್‌ಗೆ ಗುದ್ದಿ, ಅಂಡರ್‌ಪಾಸ್ ಮೇಲ್ಭಾಗದಲ್ಲಿಯೇ ಪಲ್ಟಿ ಹೊಡೆದು ಬಿದ್ದಿದೆ. ಜೋರಾಗಿ ಮಳೆ ಬರುತ್ತಿದ್ದ ಕಾರಣ ರಸ್ತೆ ಸಂಪೂರ್ಣ ನೀರು ಹರಿದಿದ್ದು, ಬ್ರೇಕ್ ಹಾಕಿದ್ದರು ಕೂಡ ಬಸ್ ನಿಲ್ಲದೇ ಬ್ಯಾರಿಕೆಡ್‌ಗೆ ಢಿಕ್ಕಿ ಹೊಡೆದು ಪಲ್ಟಿಯಾಗಿರಬಹುದು ಎನ್ನಲಾಗಿದೆ. ಅಪಘಾತ ನಡೆದ ವೇಳೆ ಬಸ್‌ನಲ್ಲಿ ಚಾಲಕ ಮತ್ತು ನಿರ್ವಾಹಕನನ್ನು ಹೊರತುಪಡಿಸಿ 3-4 ಮಂದಿ ಮಹಿಳಾ ಪ್ರಯಾಣಿಕರು ಇದ್ದು, ಬಸ್ ಪಲ್ಟಿ ಹೊಡೆದಾಗ ಸಣ್ಣ ಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ.

ಬಸ್ ಪಲ್ಟಿ ಹೊಡೆದು ಸುಮಾರು 1 ಗಂಟೆಗಳಿಗೂ ಅಧಿಕ ಕಾಲ ರಾಷ್ಟ್ರೀಯ ಹೆದ್ದಾರಿಯ ವಾಹನ ಸಂಚಾರಕ್ಕೆ ಅಡಚಣೆಯಾಗಿತ್ತು. ಅಪಘಾತ ನಡೆದ ಕೆಲವೇ ನಿಮಿಷಗಳಲ್ಲಿ ಸ್ಥಳಕ್ಕೆ ಕೋಟ ಉಪನಿರೀಕ್ಷಕ ಕಬ್ಬಾಳ್‌ರಾಜ್ ಮತ್ತು ಸಿಬ್ಬಂದಿಗಳು ಆಗಮಿಸಿ, ತಕ್ಷಣ ಕಾರ್ಯಪ್ರವೃತ್ತರಾಗಿ ವಾಹನ ಸಂಚಾರಕ್ಕೆ ಸರ್ವೀಸ್ ರಸ್ತೆಯಲ್ಲಿ ಪ್ರತ್ಯೇಕ ವ್ಯವಸ್ಥೆ ಕಲ್ಪಿಸಿದರು. ಅಲ್ಲದೇ ಹೆದ್ದಾರಿ ಕಾಮಗಾರಿಯವರ ಬಳಿಯಲ್ಲಿರುವ ಕ್ರೇನ್ ಬಳಿಸಿ ಪಲ್ಟಿ ಹೊಡೆದ ಬಸ್‌ನ್ನು ಎತ್ತಿ ಸಂಚಾರಕ್ಕೆ ಅ

ಘಟನಾಸ್ಥಳಕ್ಕೆ ಜಿಲ್ಲಾ ಪಂಚಾಯಿತಿ ಸದಸ್ಯ ರಾಘವೇಂದ್ರ ಕಾಂಚನ್ ಮೊದಲಾದವರು ಭೇಟಿ ನೀಡಿ ಇಲಾಖೆಗೆ ನೆರವು ನೀಡಿದರು.

Comments are closed.