ಮನೋರಂಜನೆ

ಸೆನ್ಸಾರ್ ಮಂಡಳಿಗೆ ನಾಚಿಕೆಯಾಗಬೇಕು: ಅಮೀರ್‌ ಖಾನ್ ಕಿಡಿ

Pinterest LinkedIn Tumblr

amirಲೂಧಿಯಾನ (ಪಿಟಿಐ): ‘ಉಡ್ತಾ ಪಂಜಾಬ್’ ಸಿನಿಮಾ ಬಿಡುಗಡೆಗೂ ಮುನ್ನವೇ ಕೆಲವು ವೆಬ್‌ಸೈಟ್‌ಗಳಲ್ಲಿ ಸೋರಿಕೆಯಾಗಿರುವುದು ವಿವಾದಕ್ಕೆ ಕಾರಣವಾಗಿದೆ.

ಸೆನ್ಸಾರ್ ಮಂಡಳಿಯಿಂದ ಪ್ರಮಾಣೀಕರಣಗೊಂಡ ಸಿನಿಮಾದ ಪ್ರತಿ ಹಲವು ವೆಬ್‌ಸೈಟ್‌ಗಳಲ್ಲಿ ಸೋರಿಕೆಯಾಗಿದೆ ಎಂದು ತಿಳಿದು ಬಂದಿದೆ.

ಇದಕ್ಕೆ ಪ್ರತಿಕ್ರಿಯಿಸಿರುವ ನಟ ಅಮೀರ್‌ ಖಾನ್, ‘ವೆಬ್‌ಸೈಟ್‌ಗಳಲ್ಲಿ ಸೋರಿಕೆಯಾಗಿರುವ ಸಿನಿಮಾ ಪ್ರತಿ ಸೆನ್ಸಾರ್ ಮಂಡಳಿಯಿಂದ ಪ್ರಮಾಣೀಕರಣಗೊಂಡಿದ್ದೆ ಎಂಬ ಬಗ್ಗೆ ನನಗೆ ಖಚಿತವಾಗಿ ಗೊತ್ತಿಲ್ಲ. ಅದೇನಾದರೂ ಸೆನ್ಸಾರ್ ಮಂಡಳಿಯಿಂದ ಪ್ರಮಾಣೀಕರಣಗೊಂಡಿದ್ದ ಪ್ರತಿಯಾಗಿದ್ದರೆ ಮಂಡಳಿಗೆ ನಾಚಿಕೆಯಾಗಬೇಕು’ ಎಂದು ಹೇಳಿದ್ದಾರೆ.

ನಾನು ಸಿನಿಮಾ ನೋಡಲು ಕಾಯುತ್ತಿದ್ದೇನೆ. ಸಿನಿಮಾ ಸೆನ್ಸಾರ್‌ಗೆ ಸಂಬಂಧಿಸಿದಂತೆ ಬಾಂಬೆ ಹೈಕೋರ್ಟ್ ನೀಡಿರುವ ತೀರ್ಪು ಸ್ವಾಗತಾರ್ಹ ಎಂದು ಅಮೀರ್‌ಖಾನ್ ಹೇಳಿದ್ದಾರೆ.
‘ಉಡ್ತಾ ಪಂಜಾಬ್’ ಚಿತ್ರತಂಡವನ್ನು ಬೆಂಬಲಿಸಿರುವ ಅಮೀರ್ ಖಾನ್, ಅಭಿಮಾನಿಗಳು ಸಿನಿಮಾವನ್ನು ಚಿತ್ರಮಂದಿರಗಳಲ್ಲಿ ನೋಡಬೇಕು ಎಂದು ಈ ಹಿಂದೆ ಟ್ವೀಟ್ ಮಾಡಿದ್ದರು.

Comments are closed.