
ಮುಂಬೈ: ಬಾಲಿವುಡ್ನ ಮೋಸ್ಟ್ ಎಲಿಜಿಬಲ್ ಬ್ಯಾಚಲರ್ ಸಲ್ಲುಮಿಯಾ ರಂಜಾನ್ಗೆ ‘ಸುಲ್ತಾನ’ನಾಗಿ ಕುಸ್ತಿಯಾಡಲು ತಯಾರಾಗಿದ್ದಾರೆ. ಈಗ ವಿಷಯ ಏನಪ್ಪಾ ಅಂದ್ರೆ, ಸಲ್ಮಾನ್ ಖಾನ್ ಮುಂದಿನ ಚಿತ್ರ ‘ಟ್ಯೂಬ್ಲೈಟ್’ ಅದು ಭಜರಂಗಿ ಭಾಯ್ಜಾನ್ ಖ್ಯಾತಿಯ ನಿರ್ದೇಶಕ ಕಬೀರ್ ಖಾನ್ ಜತೆ.
ಹಾಸ್ಯ, ರಾಜಕೀಯ ಮತ್ತು ಸಿನಿಮಾದಲ್ಲಿರಬೇಕಾದ ಡ್ರಾಮಾ ಎಲ್ಲವೂ ಚಿತ್ರದಲ್ಲಿರುತ್ತದಂತೆ. ಭಜರಂಗಿಯಲ್ಲಿ ಮೂಕ ಪಾಕಿಸ್ತಾನ ಬಾಲಕಿಯನ್ನು ಮನೆ ಸೇರಿಸುವಲ್ಲಿ ಮನೋಜ್ಞ ಅಭಿನಯ ನೀಡಿದ್ದ ಸಲ್ಲು ಭೈ, ಟ್ಯೂಬ್ಲೈಟ್ನಲ್ಲೂ ಭಾರತದಿದಂದ ಚೀನಾಕ್ಕೆ ತೆರಳುವ ಪಾತ್ರಧಾರಿಯಾಗಿ ಅಭಿನಯಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಚೀನಾಕ್ಕೆ ಸಂಬಂಧಿಸಿದ ಕೆಲ ಅಂಶಗಳು ಚಿತ್ರದಲ್ಲಿರಲಿವೆ ಎಂದು ನಿರ್ದೇಶಕ ಕಬೀರ್ ಖಾನ್ ತಿಳಿಸಿದ್ದಾರೆ. ಟ್ಯೂಬ್ಲೈಟ್ ನೋಡಬೇಕಾದರೆ ನೀವು ಮುಂದಿನ ವರ್ಷ ಈದ್ವರೆಗೆ ಕಾಯಬೇಕು.
Comments are closed.