ಅಂತರಾಷ್ಟ್ರೀಯ

ಭಾರತಕ್ಕೆ ವಿಶೇಷ ಸ್ಥಾನಮಾನ ನಿರಾಕರಿಸಿದ ಅಮೆರಿಕ ಸೆನೆಟ್!

Pinterest LinkedIn Tumblr

usa-ind

ವಾಷಿಂಗ್ಟನ್: ಭಾರತವನ್ನು ಜಾಗತಿಕ ಪ್ರಗತಿ ಮತ್ತು ರಕ್ಷಣಾ ಗೆಳೆಯ ಎಂದು ಗುರುತಿಸಲು ಅಮೆರಿಕ ಸೆನೆಟ್ ವಿಫಲವಾಗಿದೆ. ಸಂಸತ್ತಿನಲ್ಲಿ ರಫ್ತು ನಿಯಂತ್ರಣ ನಿಯಮಗಳ ಸಡಿಲಿಕೆ ಸಾಧ್ಯವಿಲ್ಲ ಮತ್ತು ಮಸೂದೆ ತಿದ್ದುಪಡಿಗೆ ಅವಕಾಶವಿಲ್ಲ ಎಂದು ನಿರಾಕರಿಸಿದೆ.

ಕೆಲ ದಿನಗಳ ಹಿಂದೆ ಅಮೆರಿಕ ಪ್ರವಾಸ ಮಾಡಿದ್ದ ಭಾರತದ ಪ್ರಧಾನಿ ಮೋದಿ ಅಮೆರಿಕದ ಕಾಂಗ್ರೆಸ್ನ ಜಂಟಿ ಸದನವನ್ನು ಉದ್ದೇಶಿಸಿ ಮಾಡಿದ್ದ ಭಾಷಣಕ್ಕೆ ರಿಪಬ್ಲಿಕನ್ ಸಿನೇಟರ್ ಜಾನ್ ಮ್ಯಾಕ್ಕೆನ್ ರಾಷ್ಟ್ರೀಯ ರಕ್ಷಣಾ ಇಲಾಖೆ ಕಾಯ್ದೆಗೆ ತಿದ್ದುಪಡಿ ಮಾಡಿ ಭಾರತವನ್ನು ಜಾಗತಿಕ ಕಾರ್ಯತಂತ್ರದ ರಕ್ಷಣಾ ಸಂಗಾತಿಯನ್ನಾಗಿ ನೇಮಿಸಲು ಮಸೂದೆ ಹೊರಡಿಸಿತ್ತು.

ಅಮೆರಿಕ ಅಧ್ಯಕ್ಷ ಬರಾಕ್ ಒಬಾಮಾ ಕೂಡ ಭಾರತ ಜಗತ್ತಿನ ಮುಖ್ಯ ರಕ್ಷಣಾ ಸಂಗಾತಿಯಾಗಲು ಸಹಮತ ಸೂಚಿಸಿದ್ದರು. ರಕ್ಷಣಾ ತಂತ್ರಜ್ಞಾನಗಳ ಬಳಕೆಯಲ್ಲಿ ಅಮೆರಿಕವು ಭಾರತದೊಂದಿಗೆ ಮೈತ್ರಿಗೆ ಸಜ್ಜಾಗಿತ್ತು.

ಉಭಯ ಪಕ್ಷೀಯ ನಿರ್ಧಾರಕ್ಕೆ ನಡೆದ ಸೆನೆಟ್ ಮತದಾನದಲ್ಲಿ ಭಾರತ ರಕ್ಷಣಾ ಸಂಗಾತಿಯಾಗಿ ನೇಮಕಕ್ಕೆ ಸೆನೆಟ್ ಮಸೂದೆ ತಿದ್ದುಪಡಿಗೆ ಪರಕ್ಕಿಂತ ವಿರೋಧ ಮತವೇ ಹೆಚ್ಚಾಗಿದ್ದು, ಸ್ಥಾನಮಾನ ನೀಡಿಕೆಗೆ ಸಾಧ್ಯವಾಗಲಿಲ್ಲ ಎಂದು ಸೆನೆಟ್ ಮೂಲಗಳು ತಿಳಿಸಿವೆ.

ಭಾರತದ ಹೆಸರು ಹೇಳದೆ ಸೆನೆಟ್ನಲ್ಲಿ ಹಲವು ಮಹತ್ವದ ಮಸೂದೆಗೆ ತಿದ್ದುಪಡಿ ಲಭಿಸದಿರುವುದಕ್ಕೆ ನಿರಾಸೆಯಾಗಿದೆ ಎಂದು ಮ್ಯಾಕ್ಕೆನ್ ಹೇಳಿದ್ದಾರೆ. ಉಭಯ ಪಕ್ಷೀಯ ಸೆನೆಟ್ನಲ್ಲಿ ಮಾಡಿದ ನಿರ್ಧಾರ ನೋವು ತಂದಿದೆ ಭಾರತದೊಂದಿಗಿನ ಬಾಂಧ್ಯವ್ಯ ವೃದ್ಧಿಗೆ ಸೇನಾ ಕಾರ್ಯತಂತ್ರ, ಮಾನವೀಯ ನೆರವು, ವಿಪತ್ತು ನಿರ್ವಹಣೆಯಲ್ಲಿ ನೆರವು ನೀಡಲು ಮುಂದಾಗಬೇಕು ಎಂದು ಅಧ್ಯಕ್ಷರಿಗೆ ಮನವಿ ಮಾಡಲಾಗುವುದು ಎಂದು ಮ್ಯಾಕ್ಕೆನ್ ಹೇಳಿದರು.

Comments are closed.