ಮನೋರಂಜನೆ

ಹೊಸ ದಾಖಲೆ ಸೃಷ್ಟಿಸಿದ ಮಹೇಂದ್ರ ಸಿಂಗ್ ಧೋನಿ

Pinterest LinkedIn Tumblr

ms-dhoni-catch

ಹರಾರೆ: ಭಾರತದ ಒಡಿಐ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ ಬುಧವಾರ ಜಿಂಬಾಬ್ವೆ ವಿರುದ್ಧದ ಮೂರನೇ ಏಕದಿನ ಪಂದ್ಯದಲ್ಲಿ ಹೊಸ ದಾಖಲೆ ಸೃಷ್ಟಿಸಿದ್ದಾರೆ. ಸ್ಟಂಪ್ ಹಿಂದೆ 350ನೇ ಕ್ಯಾಚ್ ಪಡೆಯುವ ಮೂಲಕ ಭಾರತದ ವಿಕೆಟ್ ಕೀಪರ್ ಒಬ್ಬ ಗರಿಷ್ಠ ವಿಕೆಟ್ ಸಂಪಾದಿಸಿದ ಕೀರ್ತಿಗೆ ಧೋನಿ ಪಾತ್ರರಾಗಿದ್ದಾರೆ.

ಹೌದು, ಬಿಂಬಾಬ್ವೆ ವಿರುದ್ಧದ ಪಂದ್ಯದಲ್ಲಿ 350ನೇ ವಿಕೆಟ್ ಕಬಳಿಸುವ ಮೂಲಕ ಸೀಮಿತ ಓವರ್ ಕ್ರಿಕೆಟ್ ಇತಿಹಾಸದಲ್ಲಿ ಅತ್ಯಧಿಕ ವಿಕೆಟ್ ಪಡೆದ ಭಾರತದ ಕೀಪರ್ ಎಂಬ ಗೌರವಕ್ಕೆ ಪಾತ್ರರಾಗಿದ್ದು, ವಿಶ್ವದಲ್ಲಿಯೇ 4ನೇ ಸ್ಥಾನ ಅಲಂಕರಿಸಿದ್ದಾರೆ. ಜಸ್ಪ್ರೀತ್ ಬುಮ್ರಾ ಎಸೆದ ಎಸೆತದಲ್ಲಿ ಎಲ್ಟನ್ ಚಿಗುಂಬುರಾ ಅವರ ಕ್ಯಾಚ್ ಪಡೆಯುವ ಮೂಲಕ ಧೋನಿ ಈ ಸಾಧನೆ ಮಾಡಿದ್ದಾರೆ.

278ನೇ ಏಕದಿನ ಪಂದ್ಯ ಆಡುತ್ತಿರುವ ಧೋನಿ 261 ಕ್ಯಾಚ್ ಪಡೆದಿದ್ದು, 89 ಸ್ಟಂಪ್ಡ್ ಮಾಡಿದ್ದು, ಶ್ರೀಲಂಕಾದ ಕುಮಾರ್ ಸಂಗಕ್ಕಾರ ಅಗ್ರ ಸ್ಥಾನದಲ್ಲಿದ್ದು, 482 ವಿಕೆಟ್ ಪಡೆದಿದ್ದಾರೆ. ಇನ್ನುಳಿದಂತೆ ಆಸ್ಟ್ರೇಲಿಯಾದ ಆಡಂ ಗಿಲ್ಕ್ರಿಸ್ಟ್ 472 ಹಾಗೂ ದಕ್ಷಿಣ ಆಫ್ರಿಕಾದ ಮಾರ್ಕ್ ಬೌಷರ್ 424 ವಿಕೆಟ್ ಪಡೆದು ಜಂಟಿಯಾಗಿ ತೃತೀಯ ಸ್ಥಾನದಲ್ಲಿದ್ದಾರೆ.

Comments are closed.