ವಾಷಿಂಗ್ಟನ್, ಜೂ.15- ಮುಸ್ಲಿಂ ವಿರೋಧಿ ಹೇಳಿಕೆ ಹಿನ್ನೆಲೆಯಲ್ಲಿ ತಮ್ಮ ವಿರುದ್ಧ ಹರಿಹಾಯ್ದ ಅಧ್ಯಕ್ಷ ಒಬಾಮಾರನ್ನು ಕಟುವಾಗಿ ಟೀಕಿಸಿರುವ ರಿಪಬ್ಲಿಕನ್ ಅಭ್ಯರ್ಥಿ ಡೊನಾಲ್ಡ್ ಟ್ರಂಪ್, ಬರಾಕ್ ಒಬಾಮಾ ಅವರು ಬರ್ಲಾಂಡೊ ಶೂಟರ್‍ಗಿಂತಲೂ ನನ್ನ ಮೇಲೆ ಹೆಚ್ಚಿನ ಕೋಪ ತಳೆದಿದ್ದಾರೆ ಎಂದು ಹೇಳಿದ್ದಾರೆ.
ಬರ್ಲಾಂಡೊ ಹಂತಕನಿಗಿಂತಲೂ ಒಬಾಮಾರಿಗೆ ನನ್ನ ವಿರುದ್ಧವೇ ಆಕ್ರೋಶ ಜಾಸ್ತಿ ಎಂಬುದನ್ನು ಅಮೆರಿಕ ಜನರೇ ಮಾತನಾಡುತ್ತಿದ್ದಾರೆ. ಜನರನ್ನು ಕೊಲ್ಲುವ ಭಯೋತ್ಪಾದಕರು ನಮಗೆ ಬೇಡ. ಅವರು ಇಲ್ಲಿರುವುದೂ ಬೇಡ. ಅಮೆರಿಕವು ಈಗ ಇಸ್ಲಾಂ ಮೂಲಭೂತವಾದಿ ಭಯೋತ್ಪಾದನೆಯ ಸಮಸ್ಯೆಯ ಸುಳಿಯಲ್ಲಿದೆ ಎಂದು ಟ್ರಂಪ್ ಹೇಳಿದ್ದಾರೆ.
ಚುನಾವಣೆ ಪ್ರಚಾರದ ವೇಳೆ ಡೊನಾಲ್ಡ್ ಟ್ರಂಪ್ ನೀಡಿದ್ದ ಮುಸ್ಲಿಂ ವಿರೋಧಿ ಹೇಳಿಕೆ ಕುರಿತಂತೆ ಅಧ್ಯಕ್ಷ ಒಬಾಮಾ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರು. ಹಿಲರಿ ಖಂಡನೆ: ತಮ್ಮ ಪ್ರತಿಸ್ಪರ್ಧಿ ಡೊನಾಲ್ಡ್ ಟ್ರಂಪ್ ಅವರ ಒಬಾಮಾ ಕುರಿತಾದ ಹೇಳಿಕೆಗೆ ಡೆಮಾಕ್ರೆಟಿಕ್ ಪಕ್ಷದ ಅಭ್ಯರ್ಥಿ ಹಿಲರಿ ಕ್ಲಿಂಟನ್ ತೀವ್ರ ಖಂಡನೆ ವ್ಯಕ್ತಪಡಿಸಿದ್ದಾರೆ. ಡೊನಾಲ್ಡ್ ಟ್ರಂಪ್ ಅವರು ಬರಾಕ್ ಒಬಾಮಾ ವಿರುದ್ಧ ನೀಡಿರುವ ಹೇಳಿಕೆ ನಾಚಿಕೆಗೇಡು ಎಂದು ಹಿಲರಿ ಹೇಳಿದ್ದಾರೆ. ಅಧ್ಯಕ್ಷ ಬರಾಕ್ ಒಬಾಮಾ ಅವರು ಭಯೋತ್ಪಾದಕರನ್ನು ಬೆಂಬಲಿಸುತ್ತಿದ್ದಾರೆ ಎಂಬ ಟ್ರಂಪ್ ಹೇಳಿಕೆ, ಶೂಟೌಟ್‍ನಲ್ಲಿ ಬಲಿಯಾದವರಿಗೆ ಮಾಡಿರುವ ಅವಮಾನ ಎಂದು ಹೇಳಿದ್ದಾರೆ.
Comments are closed.