ಮನೋರಂಜನೆ

ಅಭಿಮಾನಿಗಳಿಗೆ ಸಿಹಿ ಸುದ್ದಿ, ಒಂದಾದ ವಿರಾಟ್-ಅನುಷ್ಕಾ

Pinterest LinkedIn Tumblr

virat-webನವದೆಹಲಿ: ಪರಸ್ಪರ ವೈಮನಸ್ಸುಗಳಿಂದ ಬೇರೆಯಾಗಿದ್ದ ವಿರಾಟ್ ಕೊಹ್ಲಿ ಹಾಗೂ ಅನುಷ್ಕಾ ಶರ್ಮಾ ಜೋಡಿ ಇದೀಗ ಒಂದಾಗಿದ್ದಾರೆ ಎಂಬ ವದಂತಿಗೆಗಳಿಗೆ ಇನ್ನಷ್ಟು ಪುಷ್ಟಿ ದೊರೆತಿದೆ. ಚಂಡೀಗಢ ವಿಮಾನ ನಿಲ್ದಾಣದಲ್ಲಿ ಈ ಜೋಡಿ ಒಟ್ಟಿಗೆ ಕಾಣಿಸಿಕೊಳ್ಳುವ ಮೂಲಕ ಮತ್ತೆ ಜತೆಯಾಗಿದ್ದೇವೆ, ಯಾವುದೇ ವೈಮನಸ್ಸಿಲ್ಲ ಎನ್ನುವ ಸಂದೇಶ ರವಾನಿಸಿದ್ದಾರೆ.

ಭಾರತದ ಸ್ಟಾರ್ ಕ್ರಿಕೆಟಿಗ ವಿರಾಟ್ ಕೋಹ್ಲಿ ಕೆಲವು ದಿನಗಳಿಂದ ಮಂಕಾಗಿದ್ದರು. ಇದಕ್ಕೆ ಕಾರಣ ಅನುಷ್ಕಾ ದೂರವಾಗಿದ್ದು ಎಂದೆಲ್ಲಾ ಸಾಕಷ್ಟು ಸುದ್ದಿಗಳು ಅಂತರ್ಜಾಲದಲ್ಲಿ ಹರಿದಾಡುತ್ತಿದ್ದವು. ಸಾಮಾಜಿಕ ಜಾಲತಾಣಗಳಲ್ಲಂತೂ ಈ ಜೋಡಿ ಹಕ್ಕಿಯ ಬಗ್ಗೆ ಅಭಿಮಾನಿಗಳ ಚರ್ಚೆಗೆ ಅದೇ ಮಹತ್ವದ ಸುದ್ದಿಯಾಗಿತ್ತು. ಆದರೆ ಇದೀಗ ಈ ಜೋಡಿ ಇದಕ್ಕೆ ಉತ್ತರ ನೀಡಿದೆ. ಮತ್ತೆ ಇಬ್ಬರು ಒಂದಾಗಿ ಬಹಿರಂವಾಗಿ ಕಾಣಿಸಿಕೊಳ್ಳುತ್ತಿರುವುದು ಇವರ ಸಂಬಂಧ ಗಟ್ಟಿಯಾಗಿದೆ ಎನ್ನುವುದಕ್ಕೆ ಸಾಕ್ಷಿಯಾಗಿದೆ.

ಅನುಷ್ಕಾ ತಮ್ಮ ಮುಂಬರುವ ಚಿತ್ರ ಫೆಲ್ಲುರಿ ಚಿತ್ರೀಕರಣಕ್ಕಾಗಿ ಚಂಡೀಗಢಕ್ಕೆ ಆಗಮಿಸಿದ್ದಾರೆ. ಈ ಸಂದರ್ಭದಲ್ಲಿ ಅನುಷ್ಕಾ ಜತೆಗೆ ವಿರಾಟ್ ಕೂಡ ಕಾಣಿಸಿಕೊಂಡಿದ್ದಾರೆ. ಇದಕ್ಕೆ ಸಾಕ್ಷಿ ಎಂಬಂತೆ ಪೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಜೋರಾಗಿ ಹರಿದಾಡುತ್ತಿವೆ. ಕಳೆದ ಜೂನ್ 3ರಲ್ಲಿ ಸುಲ್ತಾನ್ ಸಿನಿಮಾದ ಚಿತ್ರೀಕರಕ್ಕಾಗಿ ಬುಡಾಪೆಸ್ಟ್ಗೆ ತೆರಳಬೇಕಾಗಿದ್ದ ಅನುಷ್ಕಾಳನ್ನು ವಿರಾಟ್ ಹೈದರಾವಾದ್ ವಿಮಾನ ನಿಲ್ದಾಣದವರೆಗೆ ಕಾರಿನಲ್ಲಿ ಡ್ರಾಪ್ ಮಾಡಿದ್ದರು. ನಂತರದ ದಿನಗಳಲ್ಲಿ ಅನುಷ್ಕಾ ದೆಹಲಿಯಲ್ಲಿರುವ ವಿರಾಟ್ ಮನೆಗೆ ತೆರಳಿದ್ದು ಗುಟ್ಟಾಗಿ ಉಳಿದಿಲ್ಲ.

Comments are closed.