
ಬೀಜಿಂಗ್: ಬ್ಯಾಂಕ್ಗಳು, ಫೈನಾನ್ಸ್ ಕಂಪನಿಗಳು ಸಾಲ ನೀಡುವಾಗ ಭೂಮಿ, ಬಂಗಾರ, ಆಸ್ತಿ ಪಾಸ್ತಿಗಳನ್ನು ಒತ್ತೆಯಾಗಿ ಇಟ್ಟುಕೊಳ್ಳುವದನ್ನ ನೋಡಿದ್ದೇವೆ. ಆದ್ರೆ ಚೀನಾದಲ್ಲಿ ಆನ್ಲೈನ್ ಮೂಲಕ ಸಾಲ ನೀಡುವ ಸಂಸ್ಥೆಯೊಂದು ಸ್ತ್ರೀಯರ ನಗ್ನ ಚಿತ್ರಗಳನ್ನು ಒತ್ತೆಯಾಗಿ ಇಟ್ಟುಕೊಳ್ಳುತ್ತಿದೆಯಂತೆ.
ಹೌದು, ನಂಬಲಾಗದಿದ್ರೂ ಇದು ಸತ್ಯನೇ. ಚೀನದಲ್ಲೊಂದು ಬ್ಯಾಂಕ್ ಸಾಲಗಾರರ ನಗ್ನ ಚಿತ್ರಗಳನ್ನು ಒತ್ತೆಯಾಗಿ ಇಟ್ಟುಕೊಳ್ಳುತ್ತಿದೆ. ಕೊಟ್ಟ ಸಾಲವನ್ನು ನಿಗದಿತ ಸಮಯದಲ್ಲಿ ತೀರಿಸದಿದ್ರೆ ನಗ್ನ ಚಿತ್ರವನ್ನು ಇಂಟರ್ನೆಟ್ಗೆ ಹಾಕ್ತೀವಿ ಅಂತಾ ಬೆದರಿಸುತ್ತಂತೆ. ಕೊನೆಗೂ ಹಣ ತೀರಸದೇ ಇದ್ದಾಗ ಇಂಟರ್ನೆಟ್ಗೆ ಅಪ್ಲೋಡ್ ಮಾಡುತ್ತಂತೆ. ಇದಕ್ಕೆ ಅಲ್ಲಿಯ ಜನರು ಸಹ ಅಡ್ಜಸ್ಟ್ ಆಗಿದ್ದಾರೆ ಎನ್ನುವುದೇ ಆಶ್ಚರ್ಯ.
ಆದ್ರೆ ಇದೀಗ ಜಿಯಾಂಗ್ ಪ್ರಾಂತ್ಯದ ಯುವತಿಯೋರ್ವಳು 1.20 ಲಕ್ಷ ಯಾನ್ ಸಾಲ ಪಡೆಯುವಾಗ ತನ್ನ ನಗ್ನ ಚಿತ್ರಗಳನ್ನು ಒತ್ತೆಯಾಗಿ ಇಟ್ಟಿದ್ದಳಂತೆ. ಆಕೆ ಪಡೆದ 1.20 ಲಕ್ಷ ಸಾಲ ನಾಲ್ಕು ತಿಂಗಳಲ್ಲಿ ಬಡ್ಡಿ ಸೇರಿ ಒಟ್ಟು 2.40 ಲಕ್ಷ ಯಾನ್ ಗಳಷ್ಟಾಗಿತ್ತಂತೆ. ಆದ್ರೆ ಯುವತಿಗೆ ಸಾಲ ತೀರಿಸಲು ಆಗದಿದ್ದಕ್ಕೆ ಆ ಆನ್ಲೈನ್ ಸಂಸ್ಥೆ ಯುವತಿಗೆ ನಗ್ನ ಚಿತ್ರಗಳನ್ನು ಇಂಟರ್ನೆಟ್ ಗೆ ಹಾಕುವುದಾಗಿ ಹೇಳಿದೆ. ಹೀಗಾಗಿ ಯುವತಿ ಭಾರಿ ಆತಂಕಕ್ಕೀಡಾಗಿದ್ದಳೆ. ಇದು ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆಯಾಗ್ತಿದೆ.
Comments are closed.