ಅಂತರಾಷ್ಟ್ರೀಯ

‘ನಿಮ್ಮ ವೀರ್ಯದಾನ ಮಾಡಿ ದೇಶ ಉಳಿಸಿ’ ..!

Pinterest LinkedIn Tumblr

sperಬೀಜಿಂಗ್, ಜೂ.14- ನಿಮ್ಮ ವೀರ್ಯದಾನ ಮಾಡುವ ಮೂಲಕ ನಿಮ್ಮ ದೇಶ ಉಳಿಸಿ ಇದೀಗ ಚೀನಾದಲ್ಲಿ ರಾರಾಜಿಸುತ್ತಿರುವ ಜಾಹೀರಾತು ಇದು..! ಕಾರಣ ಇಷ್ಟೇ. ಚೀನಾದಲ್ಲಿ ಜನಸಂಖ್ಯೆ ವೃದ್ಧಿಯ ಆಂದೋಲನ ನಡೆಯುತ್ತಿದೆ. ವೃದ್ಧ ದಂಪತಿಗಳೂ ಹೆಚ್ಚುವರಿಯಾಗಿ ಇನ್ನೊಂದು (ಎರಡನೆ) ಮಗು ಪಡೆಯಬಹುದು ಎಂದು ಸರ್ಕಾರ ಹೇಳಿದೆ. ಆದರೆ, ಇಲ್ಲಿನ ವೀರ್ಯ ಬ್ಯಾಂಕ್‌ಗಳು ತೀವ್ರವಾಗಿ ವೀರ್ಯ ಕೊರತೆ ಅನುಭವಿಸುತ್ತಿವೆ. ಬೇಡಿಕೆ ಹೆಚ್ಚಾಗಿದ್ದು, ಪೂರೈಕೆ ಕುಂಠಿತವಾಗಿರುವ ಹಿನ್ನೆಲೆಯಲ್ಲಿ ವಿವಿಧ ವೀರ್ಯ ಬ್ಯಾಂಕ್‌ಗಳು ತರಹೇವಾರಿ ಜಾಹೀರಾತುಗಳನ್ನು ನೀಡುತ್ತಿವೆ.

ಬರೀ ಜಾಹೀರಾತು ನೀಡುವುದಷ್ಟೇ ಅಲ್ಲ, ವೀರ್ಯದಾನ ಮಾಡುವವರಿಗೆ ಒಂದು ಸಾವಿರ ಡಾಲರ್‌ವರೆಗೆ ನಗದು ಅಥವಾ ಗೋಲ್ಡ್ ಐಪೋನ್ ನೀಡುವುದಾಗಿಯೂ ಪ್ರಕಟಣೆ ಮಾಡಲಾಗುತ್ತಿದೆ. 24 ರಿಂದ 45 ವರ್ಷ ಯವಸ್ಸಿನ ಎಲ್ಲ ಚೀನಾ ಪ್ರಜೆಗಳಿಗೂ ಜಾಹೀರಾತುಗಳ ಮೂಲಕ ಮನವಿ ಮಾಡಿಕೊಳ್ಳಲಾಗಿದೆ ಎಂದು ಸರ್ಕಾರಿ ಮೂಲಗಳು ತಿಳಿಸಿವೆ. ಇದರಲ್ಲಿ ಯಾವುದೇ ತೊಂದರೆಗಳೂ ಇಲ್ಲ. ರಕ್ತದಾನದಂತೆಯೇ ವೀರ್ಯದಾನ ಕೂಡ ಎಂದು ವೈದ್ಯಕೀಯ ಸಲಹೆಯನ್ನೂ ಜಾಹೀರಾತುದಾರರು ನೀಡುತ್ತಿದ್ದಾರೆ. ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿರುವ ಬೀಜಿಂಗ್ ಸ್ಟರ್ಮ್ ಬ್ಯಾಂಕ್, ದೇಶ ಮತ್ತು ಸಮಾಜದಿಂದ ಬದುಕುವ ನಾವು, ನಮ್ಮ ಸಮಾಜಕ್ಕೆ ಹಿಂದಿರುಗಿಸುವ ಕೊಡುಗೆ ಎಂದು ಹೇಳಿದರು.

Comments are closed.