ರಾಷ್ಟ್ರೀಯ

ದಾಭೋಲ್ಕರ್ ಹತ್ಯೆ ಪ್ರಕರಣ ಭೇದಿಸಿದ ಸಿಬಿಐ

Pinterest LinkedIn Tumblr

CBI_arrestನವದೆಹಲಿ: ವಿಚಾರವಾದಿ ಡಾ ನರೇಂದ್ರ ಧಾಬೋಲ್ಕರ್ ಹತ್ಯಾ ಪ್ರಕರಣವನ್ನು ಸಿಬಿಐ ಭೇದಿಸಿದೆ ಎಂದು ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆ ವರದಿ ಮಾಡಿದೆ.

2013ರ ಆಗಸ್ಟ್‌ 20 ರಂದು ದಾಭೋಲ್ಕರ್ ಅವರನ್ನು ಪುಣೆಯಲ್ಲಿ ಗುಂಡಿಟ್ಟು ಹತ್ಯೆ ಮಾಡಲಾಗಿತ್ತು. ಬಾಂಬೆ ಹೈಕೋರ್ಟ್‌ 2014ರ ಮೇ ತಿಂಗಳಲ್ಲಿ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಿತ್ತು.

ದಾಭೋಲ್ಕರ್ ಅವರಿಗೆ ಗುಂಡಿಕ್ಕಿದ ದುಷ್ಕರ್ಮಿಗಳು ಎಂದು ಶಂಕಿಸಲಾಗುತ್ತಿರುವ ಇಬ್ಬರು ವ್ಯಕ್ತಿಗಳು ಸನಾತನ ಸಂಸ್ಥಾದ ಸದಸ್ಯರಾಗಿದ್ದು, 2009ರ ಗೋವಾ ಬಾಂಬ್ ಸ್ಫೋಟ ಪ್ರಕರಣದ ಆರೋಪಿಗಳಾಗಿದ್ದಾರೆ.

ಆರೋಪಿಯೊಬ್ಬನನ್ನು ಸಾರಂಗ್ ಅಕೋಲ್ಕರ್ ಎಂದು ಗುರುತಿಸಿದ್ದು, ಇನ್ನೊಬ್ಬ ಹಂತಕನ ಮಾಹಿತಿಯನ್ನು ಬಹಿರಂಗ ಪಡಿಸಿಲ್ಲ.

ಪ್ರಸ್ತುತ ಪ್ರಕರಣಕ್ಕೆ ಸಂಬಂಧಿಸಿದಂತೆ ಕಳೆದ ಶುಕ್ರವಾರ ಹಿಂದೂ ಜನ ಜಾಗೃತಿ ಸಮಿತಿಯ ಸದಸ್ಯ ಡಾ, ವಿರೇಂದ್ರ ತಾವಡೆ ಅವರನ್ನು ಬಂಧಿಸಲಾಗಿತ್ತು. ತಾವಡೆ ಅವರಿಂದ ವಶಕ್ಕೆ ತೆಗೆದುಕೊಳ್ಳಗಾಗಿದ್ದ ಲ್ಯಾಪ್‍ಟಾಪ್‍ನಲ್ಲಿದ್ದ ಇಮೇಲ್, ಚಿತ್ರಗಳ ಮಾಹಿತಿಯನ್ನು ಬಳಸಿ ಸಿಬಿಐ ಈ ಹಂತರಕನ್ನು ಪತ್ತೆ ಹಚ್ಚಿತ್ತು.

Comments are closed.