
ಉಡುಪಿ: ಎಐಸಿಸಿ ಅದ್ಯಕ್ಷ ಸ್ಥಾನಕ್ಕೆ ರಾಹುಲ್ ಗಾಂಧಿ ಸೂಕ್ತ ವ್ಯಕ್ತಿ. ಅದ್ಯಕ್ಷನಾಗುವ ಬಗ್ಗೆ ಪಕ್ಷ ನಿರ್ಧಾರ ಮಾಡಿ ಆಗಿದೆ. ಅಂತಿಮ ನಿರ್ಧಾರ ಎಐಸಿಸಿ ಅದ್ಯಕ್ಷೆ ಸೋನಿಯಾ ಗಾಂಧಿ ಕೈಗೊಳ್ಳಲಿದ್ದಾರೆ ಎಂದು ರಾಜ್ಯ ಸಭಾ ಸದಸ್ಯ, ಕಾಂಗ್ರೆಸ್ ಹಿರಿಯ ಮುಖಂಡ ಆಸ್ಕರ್ ಫೆರ್ನಾಂಡೀಸ್ ಹೇಳಿದ್ದಾರೆ.





ಉಡುಪಿಯ ಕಾಂಗ್ರೆಸ್ ಭವನದಲ್ಲಿ ರಾಜ್ಯ ಸಭೆಗೆ ಮರು ಆಯ್ಕೆಯಾದ ಹಿನ್ನಲೆಯಲ್ಲಿ ಪಕ್ಷದ ಕಾರ್ಯಕರ್ಯರು ಆಸ್ಕರ್ ಫೆರ್ನಾಂಡೀಸ್‍ಗೆ ಹೂ ಹಾರ ಹಾಕಿ ಅವರನ್ನು ಸ್ವಾಗತಿಸಿದರು. ಇದೇ ಸಂದರ್ಬದಲ್ಲಿ ಮಾತನಾಡಿದ ಆಸ್ಕರ್ ಫೆರ್ನಾಂಡೀಸ್ ರಾಹುಲ್ ಗಾಂಧಿ ಎಐಸಿಸಿ ಅದ್ಯಕ್ಷ ಸ್ಥಾನ ಅಲಂಕರಿಸುವ ಬಗ್ಗೆ ಎಲ್ಲರಲ್ಲಿಯೂ ಒಮ್ಮತದ ನಿರ್ಧಾರ ಇದೆ. ಈ ಬಗ್ಗೆ ಪಕ್ಷ ಕೂಡಾ ನಿರ್ಧಾರ ಮಾಡಿದೆ. ಆದ್ರೆ ಅಂತಿಮ ನಿರ್ಧಾರವನ್ನು ಸೋನಿಯಾ ಗಾಂಧಿ ಕೈಗೊಳ್ಳಲಿದ್ದು ಗಾಂಧಿ ಕುಟುಂಬವೇ ಅದ್ಯಕ್ಷ ಸ್ಥಾನದ ಬಗ್ಗೆ ನಿರ್ಧಾರ ಕೈಗೊಳ್ಳಬೇಕು ಎಂದರು.
Comments are closed.