ಕರ್ನಾಟಕ

ಸಾಮಾಜಿಕ ಜಾಲತಾಣದಲ್ಲಿ ಜೆಡಿಎಸ್ ಭಿನ್ನ ಶಾಸಕರ ತಿಥಿ ಕಾರ್ಡ್ ಹರಿದಾಟ!

Pinterest LinkedIn Tumblr

Socialಬೆಂಗಳೂರು:ರಾಜ್ಯಸಭೆ ಚುನಾವಣೆಯಲ್ಲಿ ಅಡ್ಡಮತದಾನ ಮಾಡಿದ 8 ಶಾಸಕರ ಪರ, ವಿರೋಧ ಪ್ರತಿಭಟನೆ ನಡೆಯತ್ತಿದ್ದರೆ, ಮತ್ತೊಂದೆಡೆ ಇಬ್ಬರು ಶಾಸಕರ ತಿಥಿ ಕಾರ್ಡ್ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವುದು ತೀವ್ರ ಆಕ್ರೋಶಕ್ಕೆ ಎಡೆ ಮಾಡಿಕೊಟ್ಟಿದೆ.

ನಾಗಮಂಗಲ ಶಾಸಕ ಎನ್. ಚಲುವರಾಯಸ್ವಾಮಿ ಹಾಗೂ ಶ್ರೀರಂಗಪಟ್ಟಣ ಕ್ಷೇತ್ರದ ಶಾಸಕ ರಮೇಶ್ ಬಂಡಿಸಿದ್ದೇಗೌಡ ಅವರ ತಿಥಿ ಕಾರ್ಡ್ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ವಾಟ್ಸಪ್, ಫೇಸ್ ಬುಕ್ ನಲ್ಲಿ ಭಿನ್ನಮತೀಯ ಶಾಸಕರ ತಿಥಿ ಕಾರ್ಡ್ ಹರಿದಾಡುತ್ತಿರುವುದಕ್ಕೆ ಚಲುವರಾಯಸ್ವಾಮಿ ಖಾಸಗಿ ಹೋಟೆಲ್ ನಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಅಸಮಾಧಾನವ್ಯಕ್ತಪಡಿಸಿದ್ದಾರೆ. ನಮ್ಮ ಬೆಂಬಲಿಗರಿಗೂ ತಿಥಿ ಕಾರ್ಡ್ ಪ್ರಿಂಟ್ ಮಾಡಲು ಬರುತ್ತದೆ ಎಂದು ಕಿಡಿಕಾರಿದ್ದಾರೆ.
-ಉದಯವಾಣಿ

Comments are closed.