ಕರಾವಳಿ

ಲಂಚ ಸ್ವೀಕಾರ ಪ್ರಕರಣ : ಗ್ರಾಮಲೆಕ್ಕಿಗನ ಬಂಧನ

Pinterest LinkedIn Tumblr

arrested

ಮ೦ಗಳೂರು, ಜೂ.09: ಲಂಚ ಸ್ವೀಕರಿಸುತ್ತಿದ್ದ ಗ್ರಾಮಕರಣಿಕರನ್ನು ಭ್ರಷ್ಟಾಚಾರ ವಿರೋಧಿ ದಳ(ಎಸಿಬಿ)  ಬಂಧೀಸಿದೆ.

ಸುಳ್ಯ ತಾ. ಮಂಡೆಕೋಲು ಗ್ರಾಮದ ಗೋಪಾಲಕೃಷ್ಣ ಟಿ. ಎಂಬವರು ತನ್ನ ತಾಯಿ ಪ್ರಭಾವತಿಯ ಅಕ್ರಮ ಸಕ್ರಮ ಭೂ ಮಂಜೂರಾತಿ ಅರ್ಜಿ ಶಿಫಾರಸ್ಸು ಮಾಡಲು ಮಂಡೆಕೋಲು ಗ್ರಾಮದ ಗ್ರಾಮಲೆಕ್ಕಿಗ ಮಹೇಶ ಎಸ್. ರೂ. 57 ಸಾವಿರ ಲಂಚದ ಬೇಡಿಕೆ ಇಟ್ಟಿದ್ದು, ಈ ಬಗ್ಗೆ ಗೋಪಾಲಕೃಷ್ಣ ಟಿ. ರವರು ನೀಡಿದ ದೂರಿನ ಮೇರೆಗೆ ಭಷ್ಟಾಚಾರ ನಿಗ್ರಹ ದಳ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರಕರಣ ದಾಖಲಾಗಿತ್ತು.

ಜೂನ್  07 ರಂದು ಭ್ರಷ್ಟಾಚಾರ ನಿಗ್ರಹ ದಳ ಮಂಗಳೂರು ಪಶ್ಚಿಮ ವಲಯದ ಪೊಲೀಸ್ ಅಧೀಕ್ಷಕರಾದ ಚೆನ್ನಬಸವಣ್ಣ ಎಸ್.ಎಸ್. ಅವರ ಮಾರ್ಗದರ್ಶನದಲ್ಲಿ ಪೊಲೀಸ್ ಉಪಾಧೀಕ್ಷಕರಾದ ಸುಧೀರ್ ಹೆಗಡೆ ರವರ ನೇತ್ರೃತ್ವದಲ್ಲಿ ತನಿಖಾಧಿಕಾರಿಯವರಾದ ದಿನಕರ್ ಶೆಟ್ಟಿ ಗ್ರಾಮಲೆಕ್ಕಿಗರಾದ ಮಹೇಶ ಎಸ್. ರೂ. 45 ಸಾವಿರ ಲಂಚ ಪಡೆಯುತ್ತಿರುವಾಗ ದಾಳಿ ಮಾಡಿ ಸದರಿ ಸರ್ಕಾರಿ ನೌಕರನನ್ನು ವಶಕ್ಕೆ ತೆಗೆದುಕೊಂಡು ಲಂಚ ನಿರೋಧಕ ಕಾಯಿದೆ 1988ರನ್ವಯ ಪ್ರಕರಣ ದಾಖಲಿಸಿ ದಸ್ತಗಿರಿ ಮಾಡಿ ನ್ಯಾಯಾಲಕ್ಕೆ ಮುಂದಿನ ಕ್ರಮಕ್ಕಾಗಿ ಹಾಜರುಪಡಿಸಿರುತ್ತಾರೆ.

ದಾಳಿಯಲ್ಲಿ ಎಸಿಬಿ ಸಿಬ್ಬಂದಿಯವರಾದ ಹೆಚ್.ಸಿ. ಹರಿಪ್ರಸಾದ್, ಉಮೇಶ್, ಸಿಪಿಸಿ ಪ್ರಶಾಂತ್, ರಾಧಾಕೃಷ್ಣ್, ಚಾಲಕ ಎಪಿಸಿ ರಾಕೇಶ್ ಪಾಲ್ಗೊಂಡಿದ್ದರು.

Comments are closed.