ರಾಷ್ಟ್ರೀಯ

ಬಿಜೆಪಿ ದೇಶಕ್ಕೆ ಮಾತನಾಡುವ ಪ್ರಧಾನಿ ನೀಡಿದೆ: ಅಮಿತ್ ಶಾ

Pinterest LinkedIn Tumblr

shaಇಟಹಾ: ಕಳೆದ ಎರಡು ವರ್ಷಗಳಿಂದ ಮೋದಿ ಸರಕಾರ ಯಾವ ಸಾಧನೆ ಮಾಡಿದೆ ಎನ್ನುವ ಕಾಂಗ್ರೆಸ್ ಪಕ್ಷದ ಉಪಾಧ್ಯಕ್ಷ ರಾಹುಲ್ ಗಾಂಧಿ ವಿರುದ್ಧ ವಾಗ್ದಾಳಿ ನಡೆಸಿರುವ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ, ಬಿಜೆಪಿ ದೇಶಕ್ಕೆ ಮಾತನಾಡುವ ಪ್ರಧಾನಿ ನೀಡಿದೆ ಎಂದು ತಿರುಗೇಟು ನೀಡಿದ್ದಾರೆ.

ಯುಪಿಎ ಸರಕಾರದ 10- ವರ್ಷಗಳ ಅವಧಿಯಲ್ಲಿ ಸೋನಿಯಾಜೀ ಮತ್ತು ರಾಹುಲ್‌ಜೀಯವರ ಮಾತುಗಳನ್ನು ಕೇಳಲಾಗಿದೆಯೇ ಹೊರತು ಪ್ರಧಾನಿಯ ಧ್ವನಿಯನ್ನು ಕೇಳುವ ಸುಯೋಗ ದೊರೆಯಲಿಲ್ಲ ಎಂದು ಲೇವಡಿ ಮಾಡಿದ್ದಾರೆ.

ಮುಂದಿನ ವರ್ಷ ಉತ್ತರಪ್ರದೇಶ ಚುನಾವಣೆಯಲ್ಲಿ ಬಿಜೆಪಿ ಬಹುಮತ ಪಡೆದು ಅಧಿಕಾರಕ್ಕೆ ಬರಲಿದೆ. ಸಮಾಜವಾದಿ ಪಕ್ಷದ ಸರಕಾರ ನಾಲ್ಕು ವರ್ಷಗಳಲ್ಲಿ ಯಾವ ಸಾಧನೆ ಮಾಡಿದೆ ಎಂದರು.

ಎನ್‌‍ಡಿಎ ಸರಕಾರದ ಎರಡು ವರ್ಷಗಳ ಸಾಧನೆಯ ವಿವರ ನೀಡುತ್ತೇವೆ. ಅದರಂತೆ, ಅಖಿಲೇಶ್ ಯಾದವ್ ತಮ್ಮ ನಾಲ್ಕು ವರ್ಷಗಳ ಅವಧಿಯ ಲೆಕ್ಕ ನೀಡಲು ಸಿದ್ದರಿದ್ದಾರೆಯೇ ಎಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಪ್ರಶ್ನಿಸಿದರು.

Comments are closed.